ಉಡುಪಿ: 1998ರ ಜೂನ್ 8ರಂದು ಆರಂಭಗೊಂಡ ಉಡುಪಿಯ ಸ್ನೇಹ ಟ್ಯೂಟೋರಿಯಲ್ ಕಾಲೇಜಿಗೆ ಜಿಲ್ಲೆಯಲ್ಲಿ ವಿಶೇಷ ಹೆಗ್ಗಳಿಕೆ ಇದೆ. 2023-24ನೇ ಸಾಲಿನಲ್ಲಿ ರಜತ ಮಹೋತ್ಸವವನ್ನು ಯಶಸ್ವಿಯಾಗಿ ಆಚರಿಸಿದ ಸಂಸ್ಥೆ, ಕರಾವಳಿ ಹಾಗೂ ಮಲೆನಾಡು ಭಾಗದ ಅನೇಕ ವಿದ್ಯಾರ್ಥಿಗಳ ಬದುಕಿಗೆ ಹೊಸ ದಿಕ್ಕು ತೋರಿಸಿದೆ. ಶಿಕ್ಷಣದ ಜೊತೆಗೆ ಶಿಸ್ತು, ಮೌಲ್ಯಗಳನ್ನು ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿದೆ. ವರ್ಷದಿಂದ ವರ್ಷಕ್ಕೆ ಪಾಠ ಪ್ರವಚನಗಳಲ್ಲಿ ಹೊಸ ಪ್ರಯೋಗಗಳನ್ನು ಅಳವಡಿಸಿಕೊಂಡು, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಪದ್ಧತಿಯನ್ನು ಅನುಸರಿಸಿ ಅತ್ಯುತ್ತಮ ಸೇವೆ ನೀಡಿದೆ.
ಪ್ರತೀ ವರ್ಷವೂ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಗಮನಾರ್ಹ ಏರಿಕೆ ಕಂಡುಬಂದಿದ್ದು, ಪ್ರತಿವರ್ಷ ಎಸ್.ಎಸ್.ಎಲ್.ಸಿ. (ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮ) ಮತ್ತು ದ್ವಿತೀಯ ಪಿಯುಸಿ (ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗ) ತರಗತಿಗಳಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಅನುಭವಿ ಉಪನ್ಯಾಸಕರು, ಅತ್ಯುತ್ತಮ ಸೌಲಭ್ಯಗಳು:
ಸ್ನೇಹ ಟ್ಯೂಟೋರಿಯಲ್ ಕಾಲೇಜಿನಲ್ಲಿ ಅನುಭವೀ ಮತ್ತು ಪ್ರಾಮಾಣಿಕ ಸೇವಾ ಮನೋಭಾವ ಹೊಂದಿರುವ 13 ಮಂದಿ ಉಪನ್ಯಾಸಕರು ಮತ್ತು ಉಪನ್ಯಾಸಕಿಯರಿದ್ದಾರೆ.
ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ಪ್ರತ್ಯೇಕ ತರಗತಿಗಳನ್ನು ನಡೆಸಲಾಗುತ್ತಿದ್ದು, ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ ಮತ್ತು ಕಲಾ ವಿಭಾಗಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಈ ಎಲ್ಲಾ ವಿದ್ಯಾರ್ಥಿಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸುವ ಪರೀಕ್ಷೆಗಳಿಗೆ ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಿ ಪರೀಕ್ಷೆ ಬರೆಯಿಸಲಾಗುತ್ತದೆ. ಜಿಲ್ಲೆಯಲ್ಲಿಯೇ ಮಂಡಳಿಯಲ್ಲಿ ನೋಂದಾಯಿತ ಏಕೈಕ ಖಾಸಗಿ ಸಂಸ್ಥೆ ಎಂಬ ಹೆಗ್ಗಳಿಕೆ ನಮ್ಮ ಕಾಲೇಜಿಗಿದೆ.
ನಿಮ್ಮ ವೃತ್ತಿ ಬದುಕಿಗೆ ದಾರಿ:
ಸಂಸ್ಥೆಯಲ್ಲಿ ವಿಜ್ಞಾನ ವಿಭಾಗವು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ತರಗತಿಗಳು ದಿನಪೂರ್ತಿ ನಡೆಯುತ್ತವೆ. ಇಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಉತ್ತಮ ವೃತ್ತಿ ಬದುಕು ಕಟ್ಟಿಕೊಂಡಿರುವುದು ಸಂಸ್ಥೆಯ ಹೆಗ್ಗಳಿಕೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶೈಕ್ಷಣಿಕ ವ್ಯವಸ್ಥೆಗಳ ಜೊತೆಗೆ ವಿದ್ಯಾರ್ಥಿಗಳ ಸುರಕ್ಷತೆಗೂ ಇಲ್ಲಿ ಆದ್ಯತೆಯಿದೆ. ಸುಸಜ್ಜಿತ ತರಗತಿ ಕೊಠಡಿಗಳ ಜೊತೆ ಅದ್ಬುತ ಶೈಕ್ಷಣಿಕ ಸೌಲಭ್ಯ ಮತ್ತು ವಾತಾವರಣವಿದೆ,
ಶಿಸ್ತು ಆತ್ಮವಿಶ್ವಾಸದ ಕಲಿಕೆ:
ಪಾಠ ಪ್ರವಚನ ಮಾತ್ರವಲ್ಲ, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಶಿಸ್ತು ಹಾಗೂ ಆತ್ಮವಿಶ್ವಾಸವನ್ನು ಇಲ್ಲಿ ಬೆಳೆಸಲಾಗುತ್ತಿದೆ. ಪಠ್ಯೇತರ ಚಟುವಟಿಕೆಗಳಿಗೂ ಇಲ್ಲಿ ಪ್ರೋತ್ಸಾಹವಿದೆ.
ಸ್ನೇಹ ಟ್ಯೂಟೋರಿಯಲ್ ಕಾಲೇಜಿಗೆ ಅತ್ಯುತ್ತಮ ಶೈಕ್ಷಣಿಕ ಸೇವೆ ನೀಡಿರುವುದಕ್ಕೆ ಹಲವು ಪ್ರಶಸ್ತಿಗಳು ಲಭಿಸಿವೆ. 2010ರಲ್ಲಿ ಉಡುಪಿ ಜಿಲ್ಲಾಡಳಿತದಿಂದ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
- 7,8,9ನೇ ತರಗತಿಯಲ್ಲಿ ಅನುತ್ತೀರ್ಣಗೊಂಡವರಿಗೆ ನೇರವಾಗಿ SSLC ಪರೀಕ್ಷೆ (ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮ) ಬರೆಯುವ ಅವಕಾಶ.
- 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಹಾಗೂ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ.ಯ ಎಲ್ಲಾ ವಿಷಯಗಳಿಗೆ ನುರಿತ ಉಪನ್ಯಾಸಕರಿಂದ ಪ್ರತ್ಯೇಕ ಟ್ಯೂಷನ್ ವ್ಯವಸ್ಥೆ (ಸಂಜೆ ತರಗತಿಗಳು).
- ಪ್ರಥಮ PUC ಅನುತ್ತೀರ್ಣಗೊಂಡವರಿಗೆ ನೇರವಾಗಿ ದ್ವಿತೀಯ PUC (ವಾಣಿಜ್ಯ, ವಿಜ್ಞಾನ ಅಥವಾ ಕಲಾ) ಪರೀಕ್ಷೆ ಬರೆಯುವ ಅವಕಾಶ.
- ದ್ವಿತೀಯ PUC ಅನುತ್ತೀರ್ಣಗೊಂಡವರಿಗೆ ದ್ವಿತೀಯ PUC ವಾಣಿಜ್ಯ, ವಿಜ್ಞಾನ ಅಥವಾ ಕಲಾ ವಿಭಾಗಕ್ಕೆ ಪ್ರವೇಶ ನೀಡಲಾಗುವುದು.
ಅತ್ಯುತ್ತಮ ಶೈಕ್ಷಣಿಕ ಸೇವೆಗಳಿಗಾಗಿ ಸ್ನೇಹ ಟ್ಯೂಟೋರಿಯಲ್ ಕಾಲೇಜಿಗೆ ದಾಖಲಾಗಿ. ಉಜ್ವಲ ಭವಿಷ್ಯ ಕಟ್ಟಿಕೊಳ್ಳಿ ಸಂಪರ್ಕಿಸಿ:
ಸ್ನೇಹ ಟ್ಯೂಟೋರಿಯಲ್ ಕಾಲೇಜು, IInd Floor, Sri Ram Building, Kalsanka, Udupi-576 101.
0820-2530314, 9448376314

















