ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ “ಯಕ್ಷಸಿಂಚನ” ಯಕ್ಷಗಾನ ತಂಡವು ಫೆ. 23, 24 ಮತ್ತು 25 ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ನಡೆದ ಯಕ್ಷೋತ್ಸವ 2024 ಯಕ್ಷಗಾನ ಸ್ಪರ್ಧೆಯಲ್ಲಿ ತೃತೀಯ ಬಹುಮಾನಗಳಿಸಿದೆ.
ಒಟ್ಟು ಹನ್ನೊಂದು ತಂಡಗಳು ಮೊದಲ ಸುತ್ತಿನಲ್ಲಿ ಭಾಗವಹಿಸಿದ್ದು, ಇಚ್ಛೆಯ ಪ್ರಸಂಗವನ್ನು ಆಡಲು ಅವಕಾಶವಿತ್ತು. ಈ ಹನ್ನೊಂದು ತಂಡಗಳಲ್ಲಿ ಒಟ್ಟು ಐದು ತಂಡಗಳು ಎರಡನೇ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ಪಡೆದಿದ್ದವು. ಮೊದಲ ಸುತ್ತಿನಲ್ಲಿ “ಭೀಷ್ಮ ಪ್ರತಿಜ್ಞೆ” ಎರಡನೇ ಸುತ್ತಿನಲ್ಲಿ “ಸುಧನ್ವಾರ್ಜುನ ಕಾಳಗ” ಎಂಬ ಪ್ರಸಂಗವನ್ನು ಪ್ರದರ್ಶಿಸಲಾಯಿತು. ತೆಂಕುತಿಟ್ಟಿನ ಹೆಸರಾಂತ ಯಕ್ಷಗಾನ ಕಲಾವಿದರು ಈ ಸ್ಪರ್ಧೆಯ ಮೌಲ್ಯಮಾಪನ ನಡೆಸಿದ್ದರು.
ಈ ಸ್ಪರ್ಧೆಯಲ್ಲಿ ವೈಯಕ್ತಿಕವಾಗಿ ಗಣೇಶ್ ಪ್ರಸಾದ್ ನಾಯಕ್ ಇವರ ಹಾಸ್ಯ ವೇಷಕ್ಕೆ ದ್ವಿತೀಯ ಬಹುಮಾನ, ಗಣೇಶ್ ಪ್ರಸಾದ್ ಇವರ ರಾಜ ವೇಷಕ್ಕೆ ಪ್ರಥಮ ಬಹುಮಾನ ಮತ್ತು ತಂಡದ ಅತ್ಯುತ್ತಮ ಪ್ರದರ್ಶಕ ಪ್ರಶಸ್ತಿಯನ್ನು ಗಳಿಸಿದ್ದಾರೆ.