ಎಸ್ಎಂಎಸ್ ಪದವಿ ಪೂರ್ವ ಕಾಲೇಜು ಬ್ರಹ್ಮಾವರ: 70ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ.

ಬ್ರಹ್ಮಾವರ: ಅಜಪುರ ಕರ್ನಾಟಕ ಸಂಘ ಬ್ರಹ್ಮಾವರ ಮತ್ತು ಲಯನ್ಸ್ ಮತ್ತು ಲಿಯೊ ಕ್ಲಬ್ ಬ್ರಹ್ಮಾವರ ಬಾರ್ಕೂರು ಇವರ ಜಂಟಿ ಆಶ್ರಯದಲ್ಲಿ ಬಹಳ ವಿಜೃಂಭಣೆಯಿಂದ ಎಸ್ಎಂಎಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು.

ಈ ಕಾರ್ಯಕ್ರಮವು ಕನ್ನಡ ತಾಯಿ ಭುವನೇಶ್ವರಿಯ ಪುರ ಮೆರವಣಿಗೆಯೊಂದಿಗೆ ಸಂಪನ್ನವಾಯಿತು.

ಕಾಲೇಜಿನ ಪ್ರಾಂಶುಪಾಲರು ಉಪನ್ಯಾಸಕರು ಶಿಕ್ಷಕ ಶಿಕ್ಷಕೇತರ ಬಂಧುಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಲಯನ್ಸ್ ಅಧ್ಯಕ್ಷ ಲಯನ್ ಸುದೇಶ್ ಹೆಗ್ಡೆ, ಲಯನ್ ಪ್ರಭಾಕರ್ ಶೆಟ್ಟಿ ಹಾಗೂ ಇತರ ಲಯನ್ ಬಂದುಗಳು ಉಪಸ್ಥಿತರಿದ್ದರು. ಅಜಪುರ ಕರ್ನಾಟಕ ಸಂಘದ ಅಧ್ಯಕ್ಷರು ನಿತ್ಯಾನಂದ ಶೆಟ್ಟಿ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು . ಕರ್ನಾಟಕ ರಾಜ್ಯೋತ್ಸವದ ಶುಭ ಸಂದೇಶಗಳನ್ನು ಲಯನ್ ಕೆ.ಸುದೇಶ್ ಹೆಗ್ಡೆ ಪ್ರಾಂಶುಪಾಲರಾದ ಲಯನ್ ಐವನ್ ಸುವಾರಿಸ್ ಮತ್ತು ಅಜಪುರ ಕರ್ನಾಟಕ ಸಂಘದ ದಿನಕರ್ ಶೆಟ್ಟಿ ನೀಡಿದರು.