ಉಡುಪಿ: ನಗರದ ಸ್ಮರಣಿಕಾ ಮೊಮೆಂಟೊ ಮತ್ತು ಗಿಫ್ಟ್ ಶಾಪ್ನ 27ನೇ ವರ್ಷದ ಸಂಭ್ರಮ ಹಾಗೂ 2020ರ ಹೊಸ ವರ್ಷದ ಗಿಫ್ಟ್ ಮತ್ತು ಸ್ಮರಣಿಕೆಗಳ ಬುಕ್ಕಿಂಗ್ ಹಾಗೂ ಪ್ರದರ್ಶನದ ಉದ್ಘಾಟನೆ ಸಮಾರಂಭವು ಕಲ್ಸಂಕ ಜಂಕ್ಷನ್ ವಿಶ್ವಾಸ್ ಕಟ್ಟಡದ ಸ್ಮರಣಿಕ ರೋಯಲೆಯಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ 2020ರ ಡೈರಿ ಬಿಡುಗಡೆಗೊಳಿಸಿದ ಪ್ರಸಾದ್ ನೇತ್ರಾಲಯದ ನೇತ್ರತಜ್ಞ ಡಾ| ಕೃಷ್ಣಪ್ರಸಾದ್ ಕೂಡ್ಲು ಮಾತನಾಡಿ, ಉತ್ತಮ ಗುಣಮಟ್ಟದ ವಸ್ತುಗಳಿಂದ ವ್ಯವಹಾರ ಉನ್ನತಿ ಕಾಣುತ್ತದೆ. ಉತ್ತಮ ಸೇವೆ ಹಾಗೂ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಿ ಸ್ಮರಣಿಕ ಸಂಸ್ಥೆ ಮುನ್ನಡೆ ಸಾಧಿಸುತ್ತಿದೆ ಎಂದರು.
ಬಡಗಬೆಟ್ಟು ಕ್ರೆ.ಕೋ-ಆಪ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಕಾಲೆಂಡರ್ ಬಿಡುಗಡೆಗೊಳಿಸಿದರು. ಉದ್ಯಮಿಗಳಾದ ಎಸ್.ಕೆ. ಸಾಲ್ಯಾನ್, ಪುರುಷೋತ್ತಮ ಶೆಟ್ಟಿ, ಮನೋಹರ ಎಸ್. ಶೆಟ್ಟಿ, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ನಗರಸಭೆ ಸದಸ್ಯರಾದ ಗಿರೀಶ್ ಅಂಚನ್, ವಿಜಯ ಬೈಲೂರು, ಸಂಸ್ಥೆಯ ಮಾಲಕರಾದ ದಿವಾಕರ ಸನಿಲ್, ಆಶಾ ಉಪಸ್ಥಿತರಿದ್ದರು. ರಾಜೇಶ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.
ಸ್ಮರಣಿಕಾ ಸಂಸ್ಥೆಯಿಂದ ಸ್ಪೆಷಲ್ ಸೂಪರ್ ಆಫರ್:
ಸ್ಮರಣಿಕಾ ಮೊಮೆಂಟೊ ಮತ್ತು ಗಿಫ್ಟ್ ಶಾಪ್ನ 27ನೇ ವರ್ಷದ ಸಂಭ್ರಮ ಹಾಗೂ 2020ರ ಹೊಸ ವರ್ಷದ ಪ್ರಯುಕ್ತ
ಗ್ರಾಹಕರು ಬಯಸುವ ವಿವಿಧ ಬಗೆಯ ಮೊಮೆಂಟೊ ಮತ್ತು ಗಿಫ್ಟ್ ಐಟಮ್ಗಳು, ಬಾಂಬೆ ಸ್ವೀಟ್ಸ್ ಮಳಿಗೆಯಲ್ಲಿ ಡ್ರೈ ಫ್ರೂಟ್ಸ್, ಸ್ವೀಟ್ಸ್ ಮತ್ತು ಚಾಟ್ಸ್ಗಳು ಲಭ್ಯವಿವೆ. ಆ. 15ರಿಂದ 25ರ ವರೆಗೆ ಶೇ. 27 ರಿಯಾಯಿತಿ ಇರಲಿದೆ ೆಂದು ಸಂಸ್ಥೆ ತಿಳಿಸಿದೆ