“ಉನ್ನತಿ” ಅಂಗನವಾಡಿ ಶಿಕ್ಷಕರ ಕೌಶಲ್ಯ ಅಭಿವೃದ್ಧಿ ಕಾರ್ಯಗಾರ

24 ಸೆಪ್ಟೆಂಬರ್ ಭಾನುವಾರದಂದು, ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಆವರಣದಲ್ಲಿ “ಉನ್ನತಿ ” , ಅಂಗನವಾಡಿ ಶಿಕ್ಷಕರ ಕೌಶಲ್ಯ ಅಭಿವೃದ್ಧಿ ಕಾರ್ಯಗಾರವು ರೋಟರಿ ಐಸಿರಿ ಪರ್ಕಳ ಹಾಗೂ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಮಣಿಪಾಲ ಇವರ ಸಹಪ್ರಯೋಜಕತ್ವದಲ್ಲಿ ಬೆಳಗ್ಗೆ 9 ರಿಂದ 1 ಘಂಟೆವರೆಗೆ, ನಡೆಯಿತು.

ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನ ವಿದ್ಯಾರ್ಥಿಗಳು ಸಮರ್ಥವಾಗಿ ಪ್ರಾತ್ಯಕ್ಷಿಕೆಗಳ ತಯಾರಿ ಮತ್ತು ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ತಾವೇ ಸ್ವತಃ ತಯಾರಿಸಬಹುದಾದ ಕಲಿಕಾ ಉಪಕರಣಗಳು ಮತ್ತು ಮಕ್ಕಳ ಬೆಳವಣಿಗೆಯಲ್ಲಿ ಅವುಗಳ ಪಾತ್ರಗಳ ಬಗ್ಗೆ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನ ಪ್ರಾಂಶುಪಾಲೆ ಸುನೀತಾ ಇವರು ಮಾಹಿತಿ ನೀಡಿದರು. ಸಂವಹನ ಕಲೆಯನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಪ್ರೊ. ಚಂದ್ರಕಲಾ ಇವರು ವಿವರಿಸಿದರು.ಶಾರದಾ ಸಂಸ್ಥೆಯ ಎಲ್ಲ ಶಿಕ್ಷಕರೂ ಸಹಕರಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಐಸಿರಿ ಅಧ್ಯಕ್ಷೆ ಸ್ಮಿತಾ ಕಾಮತ್, ಕಾರ್ಯದರ್ಶಿ ಗೀತಾಶ್ರೀ ಉಪಾಧ್ಯ, ಜೊತೆ ಕಾರ್ಯದರ್ಶಿ ಗುರುಪ್ರಸಾದ್ ಕಾಮತ್, ಸಮುದಾಯ ಸೇವಾ ನಿರ್ದೇಶಕರಾದ ಪ್ರಭಾಕರ್ ಶೆಟ್ಟಿ, ನಿಯೋಜಿತ ಅಧ್ಯಕ್ಷ ಸುಕೇಶ್ ಕುಂದರ್, ಸದಸ್ಯರಾದ ಮನೋಹರ್ ಜಗನ್ನಾಥ್ ಹಾಗೂ ಅನಿಲ್ ಉಪಸ್ಥಿತರಿದ್ದರು. ಅಂಗನವಾಡಿ ಶಾಲೆಗಳ ಸೂಪರಿಂಟೆಂಡೆಂಟ್ ಶೋಭಾ ಶೆಟ್ಟಿ ಅವರು ಸಹಕರಿಸಿದರು. ಇದರಿಂದ 25 ಅಂಗನವಾಡಿ ಶಿಕ್ಷಕರು ಕಾರ್ಯಾಗಾರದ ಸದುಪಯೋಗವನ್ನು ಪಡೆದರು.