ಮುಂಬೈ: 71ನೇ ವಿಶ್ವ ಸುಂದರಿ (Miss World) ಸ್ಪರ್ಧೆಯಲ್ಲಿ ಸಿನಿ ಶೆಟ್ಟಿ (Sini Shetty) ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಶನಿವಾರ ನಡೆದ ಟಾಪ್ ಮಾಡೆಲ್ ಸ್ಪರ್ಧೆಯ ಚಿತ್ರಗಳನ್ನು ಸಿನಿ ಶೆಟ್ಟಿ ಹಂಚಿಕೊಂಡಿದ್ದಾರೆ. ಸ್ಪರ್ಧೆಯಲ್ಲಿ ಟಾಪ್ 20 ರಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿರುವ ಸಿನಿ ಶೆಟ್ಟಿ ಕಪ್ಪು ಬಣ್ಣದ ಗೌನ್ ನಲ್ಲಿ ಮಿಂಚಿದ್ದಾರೆ.
ಫ್ಯಾಷನ್ ಡಿಸೈನರ್ ರಾಕಿ ಸ್ಟಾರ್ ವಿನ್ಯಾಸಗೂಳಿಸಿದ ಕಪ್ಪು ಬಣ್ಣದ ಪೆಪ್ಲಮ್ ಗೌನ್ ಅನ್ನು ಸಿನಿ ಆಯ್ಕೆ ಮಾಡಿದ್ದಾರೆ.
ಏಷ್ಯಾ ಎಂಡ್ ಓಷಿಯಾನಿಯಾದ ಅತ್ಯುತ್ತಮ ಡಿಸೈನರ್ ಡ್ರೆಸ್‌ಗಾಗಿ ಸಿನಿ ಶೆಟ್ಟಿ ಅವರನ್ನು ವಿಜೇತರನ್ನು ಘೋಷಿಸಲಾಗಿದೆ.
ವಿಶ್ವ ಸುಂದರಿ ಸ್ಪರ್ಧೆ ಫೆಬ್ರವರಿ 18 ರಂದು ಪ್ರಾರಂಭವಾಗಿದ್ದು ಇದೇ ಮಾರ್ಚ್ 9 ರಂದು ಕೊನೆಗೊಳ್ಳಲಿದೆ. ವಿಶ್ವ ಸುಂದರಿ 2021 ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ ಮಾರ್ಚ್ 9 ರಂದು ಈವೆಂಟ್‌ನ ಕೊನೆಯಲ್ಲಿ ವಿಶ್ವ ಸುಂದರಿ ಕಿರೀಟವನ್ನು ತಮ್ಮ ಉತ್ತರಾಧಿಕಾರಿಗೆ ನೀಡಲಿದ್ದಾರೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್‌ನಲ್ಲಿ ಈವೆಂಟ್ ನಡೆಯುತ್ತಿದೆ.