ಇದೀಗ ’13’ ಎಂಬ ಶೀರ್ಷಿಕೆ ಹೊಂದಿರುವ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಈ ಚಿತ್ರದ ‘ಸಿಂಗಲ್ ಸೇವಂತಿ’ ಎಂಬ ಐಟಂ ಸಾಂಗ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ವೇಳೆ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮ ಹರೀಶ್, ವಿನಯ್ ರಾಜಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿ ತಂಡಕ್ಕೆ ಶುಭ ಕೋರಿದರು.ನಟ ರಾಘವೇಂದ್ರ ರಾಜ್ಕುಮಾರ್ ಅನಾರೋಗ್ಯದ ನಡುವೆಯೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.ರಾಘವೇಂದ್ರ ರಾಜ್ಕುಮಾರ್ ಮತ್ತು ಶೃತಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ’13’ ಸಿನಿಮಾದ ‘ಸಿಂಗಲ್ ಸೇವಂತಿ’ ಐಟಂ ಸಾಂಗ್ ಬಿಡುಗಡೆಯಾಗಿದೆ.
ಕೆ ನರೇಂದ್ರ ಬಾಬು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ’13’ ಸಿನಿಮಾದಲ್ಲಿ ರಾಘವೇಂದ್ರ ರಾಜ್ಕುಮಾರ್ ಜೊತೆ ಶೃತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಓ ಗುಲಾಬಿ’, ‘ಪಲ್ಲಕ್ಕಿ’ಯಂಥಹ ಪ್ರೇಮ ಕಥೆಗಳನ್ನೇ ಪ್ರೇಕ್ಷಕರಿಗೆ ಉಣಬಡಿಸುತ್ತ ಬಂದಿದ್ದ ನರೇಂದ್ರ ಬಾಬು ಅವರು ’13’ ಚಿತ್ರದಲ್ಲಿ ಭಾವೈಕ್ಯತೆಯ ಸಾಮಾಜಿಕ ಸಂದೇಶವಿರುವ ಕಥೆಯೊಂದನ್ನು ನಿರೂಪಣೆ ಮಾಡಿದ್ದಾರೆ.
ಸಿನಿಮಾದಲ್ಲಿ ಮನರಂಜನೆಯ ಜೊತೆಗೆ ಸಸ್ಪೆನ್ಸ್, ಥ್ರಿಲ್ಲರ್ ಕಂಟೆಂಟ್ ಕೂಡ ಇರಲಿದೆ. ಈ ಚಿತ್ರದ ‘ಸಿಂಗಲ್ ಸೇವಂತಿ’ ಎಂಬ ಐಟಂ ಸಾಂಗ್ ಇತ್ತೀಚೆಗೆ ಬಿಡುಗಡೆಯಾಗಿದೆ. ಲಕ್ಷ್ಮೀ ದಿನೇಶ್ ಸಾಹಿತ್ಯವಿರುವ ಈ ಹಾಡಿಗೆ ಇಂದು ನಾಗರಾಜ್ ದನಿಯಾಗಿದ್ದಾರೆ. ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ರಾಘವೇಂದ್ರ ರಾಜ್ಕುಮಾರ್, “ಈ ಚಿತ್ರದ ಕಥೆ, ಟೈಟಲ್ ನನಗೆ ತುಂಬಾ ಖುಷಿ ಕೊಡ್ತು. ಸಸ್ಪೆನ್ಸ್ ಇದೆ. ಚಿತ್ರ ಒಳ್ಳೆಯ ಅನುಭವ ಕೊಟ್ಟಿತು. 25 ವರ್ಷದ ಬಳಿಕ ಶೃತಿ ಅವರ ಜೊತೆ ನಟಿಸಿದ್ದೇನೆ” ಎಂದರು.
ನಿರ್ಮಾಪಕರಲ್ಲಿ ಒಬ್ಬರಾದ ಸಂಪತ್ ಕುಮಾರ್ ಮಾತನಾಡಿ, “ಸಿನಿಮಾ ಮೇಲಿನ ಶ್ರದ್ಧೆ, ಭಕ್ತಿಯಿಂದ ಒಳ್ಳೆಯ ಚಿತ್ರ ನಿರ್ಮಿಸಿದ್ದೇವೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ನಿರ್ದೇಶಕರ ಜೊತೆ ಈ ಹಿಂದೆ ಅಮೃತವಾಹಿನಿ ಎಂಬ ಸಿನಿಮಾ ಮಾಡಿದ್ದೆ. ಉಳಿದ ನಿರ್ಮಾಪಕರುಗಳಾದ ಮಂಜುನಾಥ್ ಗೌಡ, ಹೆಚ್ ಎಸ್ ಮಂಜುನಾಥ್ ಹಾಗೂ ಕೇಶವ ಮೂರ್ತಿ ಸೇರಿ ಬಹಳ ಪ್ರೀತಿಯಿಂದ ಈ ಸಿನಿಮಾ ಮಾಡಿದ್ದಾರೆ” ಎಂದು ತಿಳಿಸಿದರು. ಸದ್ಯ ಹಾಡಿನಿಂದಲೇ ಗಮನ ಸೆಳೆಯುತ್ತಿರುವ ’13’ ಸಿನಿಮಾ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.
ಬಳಿಕ ನಾಯಕಿ ನಟಿ ಶೃತಿ ಮಾತನಾಡಿ, “ಮೊದಲ ಬಾರಿಗೆ ಮುಸ್ಲಿಂ ಮಹಿಳೆಯ ಪಾತ್ರ ಮಾಡಿದ್ದೇನೆ. ನನ್ನ ಪಾತ್ರದ ಹೆಸರು ಸಾಹಿರಾಬಾನು, ಸಿನಿಮಾ ತುಂಬಾ ಚೆನ್ನಾಗಿದೆ” ಎಂದು ಹೇಳಿದರು. ನಂತರ ನಿರ್ದೇಶಕ ನರೇಂದ್ರ ಬಾಬು ಮಾತನಾಡಿ, “ನಾನು ಈ ಕಥೆ ಬರೆದಾಗ ಮೋಹನ್ ಪಾತ್ರಕ್ಕೆ ರಾಘಣ್ಣ ಅವರೇ ಕಣ್ಣ ಮುಂದೆ ಬಂದರು. ನಂತರ ಶೃತಿ ಅವರು ಮುಸ್ಲಿಂ ಮಹಿಳೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಬ್ಬರೂ ನಮ್ಮ ಚಿತ್ರಕ್ಕೆ ಎರಡು ಕಣ್ಣಿನ ಥರ. ಚಿತ್ರ ಮಾಡುವಾಗ ನಾನಾ ಅಡೆ ತಡೆಗಳಿದ್ದವು. ಅದೆಲ್ಲವನ್ನೂ ದಾಟಿ ಬಂದಿದ್ದೇವೆ. ಮೊದಲ ಪ್ರತಿ ನೋಡಿದಾಗ ಎಲ್ಲಾ ಮರೆತು, ತುಂಬಾ ಖುಷಿಯಾಯ್ತು. ಬಾಂಬೆ ಮೂಲದ ಪ್ರೀತಿ ಗೋಸ್ವಾಮಿ ಅವರು ಐಟಂ ಸಾಂಗ್ಗೆ ಹೆಜ್ಜೆ ಹಾಕಿದ್ದಾರೆ. ಸ್ಲೋಗನ್ ಬಾಬು ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ” ಎಂದು ಮಾಹಿತಿ ನೀಡಿದರು.