ವಿಶ್ವದಾದ್ಯಂತ ಕಿಚ್ಚು ಹಚ್ಚಿದ ಕಾಂತಾರ ಚಿತ್ರದ ಸಿಂಗಾರ ಸಿರಿಯೆ ಗೀತೆಯನ್ನು ಮೆಚ್ಚದವರೇ ಇಲ್ಲ. ಇದೀಗ ಸಿಂಗಾರ ಸಿರಿಯೆ ಹಾಡಿನ ತುಳು ಆವೃತ್ತಿಯು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರತಾಪ್ ಶೆಟ್ಟಿ ಸಾಹಿತ್ಯದ ಗೀತೆಯನ್ನು ಝೀಟಿವಿಯ ಸರೆಗಮಪ ಸಂಗೀತ ರಿಯಾಲಿಟಿ ಶೋ ವಿಜೇತ ಗಗನ್ ಗಾಂವ್ಕರ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಹಾಡಿನ ಮಿಕ್ಸಿಂಗ್ ಅನ್ನು ಉಡುಪಿಯ ನಿನಾದ್ ಆಡಿಯೋ ರೆಕಾರ್ಡಿಂಗ್ ಮಿಕ್ಸಿಂಗ್ ಸ್ಟುಡಿಯೋನ ಶರತ್ ಉಚ್ಚಿಲ ಮಾಡಿದ್ದಾರೆ.