ಆ.24 ರಿಂದ ಸಿದ್ಧಕಟ್ಟೆಯಲ್ಲಿ ಆನಂದ ಶಿಬಿರ

ಬಂಟ್ವಾಳ: ಆರ್ಟ್ ಆಫ್ ಲಿವಿಂಗ್ ಸಿದ್ಧಕಟ್ಟೆ ಘಟಕದ ವತಿಯಿಂದ  ಆ.24 ರಿಂದ ಆ29  ರ ವರೆಗೆ ಆನಂದ ಶಿಬಿರ ಸಿದ್ಧಕಟ್ಟೆ ಜೈನ ಬಸದಿಯ ‘ಸ್ವಸ್ತಿಕ್ ಸಭಾಭವನ’ ದಲ್ಲಿ  ನಡೆಯಲಿದೆ.

ಯೋಗ ತರಬೇತಿಯನ್ನು ಯೋಗ ಗುರುಗಳಾದ  ಅನಿತಾ ಮುರಳಿಕೃಷ್ಣ ನಡೆಸಿಕೊಡಲಿದ್ದಾರೆ. ಯೋಗ, ಪ್ರಾಣಾಯಾಮ, ಸುದರ್ಶನ ಕ್ರಿಯಾ, ಮಾನಸಿಕ ಮತ್ತು ದೈಹಿಕ ಸಮತೋಲನ, ಸಾತ್ವಿಕ ಆಹಾರಕ್ರಮ  ಮೊದಲಾದ ಆರೋಗ್ಯ ಮತ್ತು ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ಇದು ಒಳಗೊಂಡಿದೆ.  ಬೆಳಿಗ್ಗೆ ಗಂಟೆ 10-ರಿಂದ ಮಧ್ಯಾಹ್ನ 12 ರ ವರೆಗೆ ನಡೆಯುವ ಈ ಶಿಬಿರದಲ್ಲಿ 14 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದವರು ಭಾಗವಹಿಸಬಹುದು. ಹೆಚ್ಚಿನ ಮಾಹಿತಿ ಮತ್ತು ನೋಂದಾವಣೆಗೆ . ಮೊ-9449102500, 9480229329: ಸಂಪರ್ಕಿಸಬಹುದು.