ಉಡುಪಿ: ಡಿ 16 ಮತ್ತು 17 ರಂದು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ದಿವ್ಯಾಂಗರ ಮಾಹಿತಿ ಕಾರ್ಯಗಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು ಇದರ ಸಮಾರೋಪ ಕಾರ್ಯಕ್ರಮದ ಗೌರವ ಅಧ್ಯಕ್ಷತೆಯನ್ನು ಶ್ರೀಶ್ರೀ ವಿದ್ಯಾಸಾಗರ ತೀರ್ಥ ಶ್ರೀ ಪಾದರು ಶ್ರೀ ಪರ್ಯಾಯ ಶ್ರೀ ಕೃಷ್ಣಾಪುರ ವಹಿಸಿದ್ದು, ತಮ್ಮ ಅನುಗ್ರಹ ಭಾಷಣದಲ್ಲಿ ದಿವ್ಯಾಂಗರು ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗುವಲ್ಲಿ ಸಮಾಜದ ಎಲ್ಲಾ ನಾಗರಿಕರು ತಮ್ಮ ಕೆಲಸ ನಿರ್ವಹಿಸುವುದರೊಂದಿಗೆ ದಿವ್ಯಾಂಗರ ಜೊತೆಗೂ ಕೈ ಜೋಡಿಸಿ ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಹೆಬ್ಬಾರ್, ರಾಜ್ಯಾಧ್ಯಕ್ಷ ನಾಗರಾಜ ಬಿ ಎನ್ , ದಿವ್ಯಾಂಗ ರಕ್ಷಣಾ ಸಮಿತಿ ಸಂಚಾಲಕ ವಿಜಯ್ ಕೊಡವೂರ್, ವಿಕಲ ಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ನಿರಂಜನ್ ಭಟ್ , ಪರ್ಯಾಯ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿಷ್ಣು ಪ್ರಸಾದ್ ಪಾಡಿಗಾರ್ ಉಪಸ್ಥಿತರಿದ್ದರು.
ಆಕಾಶ್ ಶೆಟ್ಟಿ ಅಂಪಾರು ಕಾರ್ಯಕ್ರಮ ನಿರೂಪಿಸಿದರು.












