ಟೆನ್ನಿ ಕೋಯಿಟ್ ಹಾಗೂ ಟೆನ್ನಿಸ್ ವಾಲಿಬಾಲ್ ಪಂದ್ಯಾಟ: ಚಾಂಪಿಯನ್ ಆಗಿ ಹೊರ ಹೊಮ್ಮಿದ ಶ್ರೀ.ವೆಂ.ಪ.ಪೂ ಕಾಲೇಜು

ಕುಂದಾಪುರ : ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ನ್ಯಾಶನಲ್ ಪದವಿ ಪೂರ್ವ ಕಾಲೇಜು ಬಾರಕೂರು ಇವರ ಸಹಯೋಗದಲ್ಲಿ ನಡೆದ ಟೆನ್ನಿ ಕೋಯಿಟ್ ಪಂದ್ಯಾಟ ದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು, ಬಾಲಕರ ತಂಡ ದ್ವಿತೀಯ ಸ್ಥಾನವನ್ನು, ಟೆನ್ನಿಸ್ ವಾಲಿಬಾಲ್ ಪಂದ್ಯಾಟದಲ್ಲಿ ಬಾಲಕ ಮತ್ತು ಬಾಲಕಿಯರ ತಂಡ ದ್ವಿತೀಯ ಸ್ಥಾನ ವನ್ನು ಪಡೆಯುವುದರ ಮೂಲಕ ಜಿಲ್ಲಾ ಮಟ್ಟದಲ್ಲಿ ಚಾಂಪಿಯನ್ ಆಗಿ ಮಿಂಚಿದ್ದಾರೆ. ಸಾತ್ವಿಕ್, ವಿನಯ್, ಕಲ್ಪಿತಾ, ಲಿಖಿತಾ ರಾಜ್ಯ ಮಟ್ಟದಲ್ಲಿ ನಡೆಯುವ ಟೆನ್ನಿಸ್ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ದೈಹಿಕ ಶಿಕ್ಷಣದ ಉಪನ್ಯಾಸಕ ರಾಘವೇಂದ್ರ ಗಾಣಿಗ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದ್ದಾರೆ. ವಿದ್ಯಾರ್ಥಿನಿಯರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.