ಸಿಇಟಿ ಫಲಿತಾಂಶದಲ್ಲಿ ವೆಂಕಟರಮಣ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಕುಂದಾಪುರ : ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ರಾಜ್ಯಮಟ್ಟದ ರ‍್ಯಾಂಕುಗಳೊಂದಿಗೆ ಗುರುತಿಸಿಕೊಂಡ ಕಾಲೇಜು ಇದೀಗ ಸಿಇಟಿ ಫಲಿತಾಂಶದಲ್ಲಿ ಅಪೂರ್ವ ಸಾಧನೆ ಮೆರೆದಿದೆ.

2021 – 22ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ( ಕೆ-ಸಿಇಟಿ) ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀವರ್ಷ (ಎಂಜಿನಿಯರಿಂಗ್- 422 ), ಮನೀಶ್ ಹೆಬ್ಬಾರ್ (ಎಂಜಿನಿಯರಿಂಗ್ – 1090, ಎಗ್ರಿಕಲ್ಚರ್- 287, ವೆರ್ಟನರಿ- 1100, ಬಿಎನ್‌ವೈಎಸ್ -505 ), ಕೀರ್ತನ್ ಕಿಣಿ (ಎಂಜಿನಿಯರಿಂಗ್- 1139), ಯು. ಕಾರ್ತಿಕ್ ಐತಾಳ್ (ಎಂಜಿನಿಯರಿಂಗ್- 1272 , ಎಗ್ರಿಕಲ್ಚರ್- 396), ರವಿಕಿರಣ್ ಐತಾಳ್ (ಎಂಜಿನಿಯರಿಂಗ್- 1370), ಅತೀಕ್ ಹೆಬ್ಬಾರ್ (ಎಂಜಿನಿಯರಿಂಗ್- 1558), ಕಿಶನ್ ಕುಮಾರ್ ಎಸ್.ಡಿ (ಎಂಜಿನಿಯರಿಂಗ್- 1642), ಪ್ರಾಚಿ.ಎನ್ (ಎಂಜಿನಿಯರಿಂಗ್- 1662), ಸಾಹಿಲ್ ಶೇಖರ್ (ಎಂಜಿನಿಯರಿಂಗ್- 1764) ಉನ್ನತ ಮಟ್ಟದ ರ‍್ಯಾಂಕುಗಳನ್ನು ಪಡೆದಿರುತ್ತಾರೆ.

ಪಠ್ಯಕ್ರಮವನ್ನು ಕ್ರಮಬದ್ಧವಾಗಿ ಬೋಧಿಸುವುದರೊಂದಿಗೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗಕ್ಕೆ ಪೂರಕವಾಗಬೇಕು ಎನ್ನುವ ನಿಟ್ಟಿನಲ್ಲಿ ನಿರಂತರವಾಗಿ ಸಿಇಟಿ, ನೀಟ್ , ಜೆಇಇ ತರಬೇತಿಯನ್ನು ಕಾಲೇಜಿನಲ್ಲಿ ನೀಡಲಾಗುತ್ತಿರುವುದರಿಂದ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಅತ್ಯುತ್ತಮ ರ‍್ಯಾಂಕುಗಳನ್ನು ಪಡೆಯುವುದರೊಂದಿಗೆ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು , ಉಪನ್ಯಾಸಕ ವೃಂದದವರು , ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.