ಹಿರಿಯಡಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ: ಎ.16 ರಂದು ಸಿರಿಜಾತ್ರೆ; ಎ.19 ರಂದು ಮನ್ಮಹಾರಥೋತ್ಸವ

ಹಿರಿಯಡಕ: ಉಡುಪಿ ತಾಲೂಕು ಶ್ರೀ ಕ್ಷೇತ್ರ ಹಿರಿಯಡಕ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಎ.16 ರಿಂದ 21ರ ವರೆಗೆ ವೈಭವದ‌ ಜಾತ್ರಾ ಮಹೋತ್ಸವ ಶ್ರೀ ವೀರಭದ್ರ ಸ್ವಾಮಿ ಸನ್ನಿಧಿಯಲ್ಲಿ ಸಾಂಪ್ರದಾಯದಂತೆ ಜರಗಲಿರುವುದು.

ಧಾರ್ಮಿಕ ಕಾರ್ಯಕ್ರಮಗಳು:

ತಾ.16 ರಂದು ಶನಿವಾರ ಗಂಟೆ 8.00ಕ್ಕೆ ಧ್ವಜಾರೋಹಣ, ಗಣಯಾಗ, ನವಕ ಪ್ರಧಾನ ಹೋಮ, ರಾತ್ರಿ ಗಂಟೆ 6.30 ರಿಂದ ಆರಾಧನಾ ಪೂಜೆ, ಪೂರ್ಣಿಮಾ ಉತ್ಸವ. ರಾತ್ರಿ 9 ಗಂಟೆಯಿಂದ ಹಾಲು ಹಬ್ಬ, ಸವಾರಿ ಬಲಿ, ಬ್ರಹ್ಮ ಮಂಡಲ, ಭೂತ ಬಲಿ.

ತಾ.17 ರಂದು ರವಿವಾರ ರಾತ್ರಿ ಗಂಟೆ 7 ರಿಂದ ಆರಾಧನಾ ಪೂಜೆ, ಬೈಗಿನ ಬಲಿ, ಸವಾರಿ ಬಲಿ, ಆರಾಧನ ಬಲಿ.

ತಾ.18 ರಂದು ಸೋಮವಾರ ರಾತ್ರಿ ಗಂಟೆ 7 ರಿಂದ ಆರಾಧನಾ ಪೂಜೆ, ನಿತ್ಯಬಲಿ, ಸವಾರಿ ಬಲಿ, ಮಹಾರಂಗಪೂಜೆ, ಭೂತ ಬಲಿ.

ತಾ.19 ರಂದು ಮಂಗಳವಾರ ಪ್ರಾತಃ ಸಂಕಷ್ಟಿ ಗಣಯಾಗ, ಮಧ್ಯಾಹ್ನ ಗಂಟೆ 12.10ಕ್ಕೆ ರಥಾರೋಹಣ. ರಾತ್ರಿ ಗಂಟೆ 6 ರಿಂದ ಶ್ರೀ ಮನ್ಮಹಾರಥೋತ್ಸವ, ಭೂತಬಲಿ, ಕವಾಟಪೂರಣ.

ತಾ.20‌ ರಂದು ಬುಧವಾರ 8 ಗಂಟೆ ರಿಂದ ಕವಾಟೋದ್ಘಾಟನೆ, ತುಲಾಭಾರ ಸೇವೆ, ಮಹಾಪೂಜೆ. ರಾತ್ರಿ ಗಂಟೆ 7.00 ರಿಂದ ಆರಾಧನಾ ಪೂಜೆ, ಓಕುಳಿ, ಅವಭೃತ ಸ್ನಾನ, ಧ್ವಜಾವರೋಹಣ.

ತಾ.21 ರಂದು ಗುರುವಾರ ಗಂಟೆ 8 ರಿಂದ ಮಹಾಸಂಪ್ರೋಕ್ಷಣೆ, ಚಂಡಿಕಾಯಾಗ, ಮಾರಿಪೂಜೆ, ಅನ್ನಸಂತರ್ಪಣೆ, ಸಮಾರಾಧನೆ, ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.