ಮಣಿಪಾಲ: ಶ್ರೀ ಶಾರದಾ ಶಿಕ್ಷಕಿಯರ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವವು ಫೆ.28 ರಂದು ಸಂಸ್ಥೆಯ ಆವರಣದಲ್ಲಿ ನಡೆಯಿತು. ಸೈಂಟ್ ಸಿಸಿಲಿ ಕಾನ್ವೆಂಟ್ನ ಪೂರ್ವ ಪ್ರಾಥಮಿಕ ವಿಭಾಗದ, ಕೋ-ಅರ್ಡಿನೇಟರ್-ಸುಪೀರಿಯರ್ ಸಿಸ್ಟರ್ ಪ್ರೀಯಾ ಮರಿಯರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶ್ರೀಮತಿ ಚಂದ್ರಕಲಾರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು.
ಸಮಾರಂಭದಲ್ಲಿ ಪುತ್ತೂರಿನ ಈಶ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಗೋಪಾಲಕೃಷ್ಣ ಯಂ. ಅವರನ್ನು ವಿಶೇಷ ಸಾಮಾಜಿಕ ಕಾರ್ಯಗಳಿಗಾಗಿ ಸಂಸ್ಥೆಯ ವತಿಯಿಂದ ಸನ್ಮಾಸಿಲಾಯಿತು.
ಮುಖ್ಯ ಅತಿಥಿಗಳಾದ ಸಿಸ್ಟರ್ ಪ್ರೀಯಾ ಮರಿಯರವರು ತಮ್ಮ ಭಾಷಣದಲ್ಲಿ ‘ಮಕ್ಕಳ ಬಗ್ಗೆ ತಾಳ್ಮೆ ಮತ್ತು ಪ್ರೀತಿಯನ್ನು ವಹಿಸಿ ಅವರಲ್ಲಿನ ಸೃಜನಶೀಲತೆಯನ್ನು ಬೆಳೆಸುವ ಜವಾಬ್ದರಿಯು ಶಿಕ್ಷಕರಿಗಿದ್ದು ಅದನ್ನು ಅವರು ಸಂಪೂರ್ಣ ಪ್ರಾಮಾಣಿಕತೆಯಿಂದ ಪ್ರಯತ್ನಿಸಬೇಕು ಏಕೆಂದರೆ ಬೋಧನೆಯು ಕೇವಲ ಒಂದು ವೃತ್ತಿಯಲ್ಲ, ಮಕ್ಕಳ ವ್ಯಕ್ತಿತ್ವ ಮತ್ತು ಭವಿಷ್ಯದ ಪೀಳಿಗೆಯನ್ನು ರೂಪಿಸುವ ಒಂದು ಸೇವೆಯಾಗಿದೆ’ ಎಂದು ತಿಳಿಸಿದರು.
ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ಸುನೀತಾರವರು ವರದಿ ವಾಚನ ಮಾಡಿದರು. ಶ್ರೀಮತಿ ದಿವ್ಯಾ ಕೋಟ್ಯಾನ್ರವರು ಸಂಸ್ಥೆಯಲ್ಲಿ ನಡೆಯುವ ವಿವಿಧ ಚಟುವಟಿಕೆಗಳ ಬಗ್ಗೆ ವರದಿಯನ್ನು ಸಲ್ಲಿಸಿದರು.
ಅತಿಥಿ ಉಪನ್ಯಾಸಕಿ ಕು. ಮಂಗಳಾ ಶೆಣೈರವರು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ ವೇದ ಗಣಿತ ಹಾಗೂ ಅಬಾಕಸ್ ಪರೀಕ್ಷೆಯಲ್ಲಿ ವಿಶಿಷ್ಠವಾದ ಶ್ರೇಣಿಯಲ್ಲಿ ಉತ್ತೀರ್ಣರಾದ ಹಾಗೂ ಇಂಗ್ಲೀಷ್ ಉಪನ್ಯಾಸಕಿ ಶ್ರೀಮತಿ ಚೇತನಾ ಮತ್ತು ವಿದ್ಯಾರ್ಥಿನಿ ನೀತಾರವರು ವಿವಿಧ ಹಂತಗಳನ್ನು ಪೂರೈಸಿದ ವಿದ್ಯಾರ್ಥಿಗಳ ವಿವರಗಳನ್ನು ತಿಳಿಸಿದರು.
ವಿದ್ಯಾರ್ಥಿನಿಯರಾದ ಶ್ರೀಮತಿ ಶ್ವೇತಾ ಅತಿಥಿಗಳನ್ನು ಸ್ವಾಗತಿಸಿ ಹಾಗೂ ಶ್ರೀಮತಿ ರಾಜಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ರಶ್ಮಿತಾರವರು ಸಭೆಗೆ ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿದರು. ಶ್ರೀಮತಿ ಜೀವಿತಾ ವಿಶೇಷ ಆಹ್ವಾನಿರಾದ ಡಾ. ಗೋಪಾಲಕೃಷ್ಣ ಯಂ. ಅವರ ಪರಿಚಯ ಮಾಡಿದರು. ಕು. ನಿಧಿ ವಂದಾರ್ಪಣೆಗೈದರು. ವೇದಿಕೆಯಲ್ಲಿ ಸಂಸ್ಥೆಯ ಸಲಹಾ ಸಮಿತಿಯ ಡಾ. ಎನ್.ವಿ. ಕಾಮತ್ರವರು ಉಪಸ್ಥಿತರಿದ್ದರು. ಕೊನೆಯಲ್ಲಿ ತರಬೇತಿ ಪಡೆಯುತ್ತಿರುವ ಶಿಕ್ಷಕಿಯರುಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.


















