ಉಡುಪಿ: ಶ್ರೀ ಶಾರದ ಟೀಚರ್ ಟ್ರೈನಿಂಗ್ ಸಂಸ್ಥೆಯ ಶಿಕ್ಷಕಿಯರಿಗೆ ಮಕ್ಕಳಲ್ಲಿನ ಕಲ್ಪನಾಲೋಕವನ್ನು ವ್ಯಕ್ತಪಡಿಸುವ ಪರಿ ಮತ್ತು ಕಲಾ ಮಹತ್ವತೆಯ ಬಗ್ಗೆ ವಿಶೇಷ ಕಲಾ ತರಬೇತಿಯನ್ನು ನೀಡಲಾಯಿತು. ತ್ರಿವರ್ಣ ಕಲಾಕೇಂದ್ರದ ಮುಖ್ಯಸ್ಥ, ಕಲಾವಿದ ಹರೀಶ್ ಸಾಗರವರು ರೇಖೆ, ಆಕಾರ, ಬಣ್ಣ, ಸಮತೋಲನ, ಸಂಯೋಜನೆಗಳಿಂದ ಕಲ್ಪನೆಯ ಚಿತ್ರವು ಸಾಕಾರಗೊಳಿಸುವಲ್ಲಿ ಕಲಾ ಶಿಕ್ಷಣ ಮುಖ್ಯ ವಾಹಿನಿಯಾಗಿದ್ದು, ಪೂರ್ವ ಪ್ರಾಥಮಿಕ ಮಕ್ಕಳಲ್ಲಿನ ಕಲಾ ಪ್ರಜ್ಞೆಯನ್ನು ಹೇಗೆ ಅವಲೋಕಿಸಬೇಕೆಂದು ತಿಳಿಯ ಪಡಿಸಿದರು. ಚಿತ್ರಕಲೆಯು ಮಕ್ಕಳ ಕಲ್ಪನೆ, ಸೃಜನಶೀಲತೆ, ಕೈ-ಕಣ್ಣಿನ ಸಮನ್ವಯ, ಆತ್ಮವಿಶ್ವಾಸ ಬೆಳೆಸುವಲ್ಲಿ ಹಾಗೂ ಭವಿಷ್ಯದ ಕಲಿಕೆಗೆ ಬಲವಾದ ಅಡಿಪಾಯ ಎಂದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಸುನೀತಾರವರು ಅವಕಾಶವನ್ನು ಕಲ್ಪಿಸಿಕೊಟ್ಟರು. ಶ್ರೀ ಶಾರದ ಟೀಚರ್ ಟ್ರೈನಿಂಗ್ ಸಂಸ್ಥೆಯಲ್ಲಿ ಕೇವಲ ಕೆಲವು ಸೀಟುಗಳು ಲಭ್ಯವಿದ್ದು ಆಸ್ತಕರು ಕೂಡಲೇ ಸಂಪರ್ಕಿಸಬಹುದು. ಮೊ:9901722527














