ಉಡುಪಿ:ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಪಂಚಮುಖಿ ಗಾಯತ್ರಿ ದೇವಿಯ ದೃಢ ಕಲಾಶೋತ್ಸವ ಸಂಪನ್ನ

ಉಡುಪಿ:ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಗಾಯತ್ರಿ ಧ್ಯಾನಪೀಠದಲ್ಲಿರುವ ಶ್ರೀ ಪಂಚಮುಖಿ ಗಾಯತ್ರಿ ದೇವಿಯ ಪ್ರತಿಷ್ಠಾ ದೃಢಕಲಶ ಮಹೋತ್ಸವ ವು ಕ್ಷೇತ್ರದ ಧರ್ಮದರ್ಶಿ, ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಿತು.

ದೃಢ ಕಲಶೋತ್ಸವದ ಪೂರ್ವಭಾವಿ ಧಾರ್ಮಿಕ ಕಾರ್ಯಕ್ರಮವಾಗಿ ವಾಸ್ತು, ರಾಕ್ಷೋಗ್ನದಿ ಪ್ರಕ್ರಿಯೆಗಳು ಸಪ್ತ ಶುದ್ಧಿ ಪ್ರಾಸಾದ ಶುದ್ಧಿ, ಕಲಶಾದಿವಾಸ ಪ್ರಕ್ರಿಯೆಗಳು ನೆರವೇರಿತು.

ಶುಕ್ರವಾರ ಪ್ರಾತಃಕಾಲ ತ್ರಿ ನಾಳಿಕೇರ ಗಣ ಯಾಗ, ಪ್ರಧಾನಯಾಗ, ಹಾಗೂ ಒದಗಿದ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕವನ್ನು ವೇದಮೂರ್ತಿ ಸರ್ವೇಶ ತಂತ್ರಿ ಸಂಪನ್ನ ಗೊಳಿಸಿ ದರು. ನಂತರ ನ್ಯಾಸ ಪೂಜೆ, ಬ್ರಾಹ್ಮಣ ಸುವಾಸಿನಿ ಆರಾಧನೆ ಪ್ರಸನ್ನ ಪೂಜೆ, ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ನೆರವೇರಿತು.

ಪ್ರಸನ್ನಕ್ಷಿಯ ಸನ್ನಿಧಾನದಲ್ಲಿ ನವಕ ಕಲಶ ಪ್ರಧಾನ ಹೋಮ ಕಲಶ ಅಭಿಷೇಕ ವರ್ಧಂತಿ ಮಹೋತ್ಸವದ ಪ್ರಯುಕ್ತ ಶ್ರೀಯುತ ಗಣೇಶ್ ಸರಳಾಯ ಅವರು ನೆರವೇರಿಸಿದರು.

ವೇದಮೂರ್ತಿ ವಿಕ್ಯಾತ್ ಭಟ್ ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.