ಹಿರಿಯಡ್ಕ: ಯಕ್ಷ ಧ್ರುವ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ, ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಪಾವಂಜೆ ಮೇಳದ ಶ್ರೀ ದೇವಿ ಮಹಾತ್ಮೆ ಯಕ್ಷಗಾನವು ಜನವರಿ 1 ರಂದು ಹಿರಿಯಡ್ಕ ಮಾತೃಶ್ರಿ ಶೇಡಿ ಕೊಂಡಾಡಿ ಇಲ್ಲಿ ಸಂಜೆ 6 ಗಂಟೆಗೆ ಪ್ರಪ್ರಥಮ ಬಾರಿಗೆ ನಡೆಯಲಿದೆ.
ಜಮ್ಮು ಕಾಶ್ಮೀರ ಸರಕಾರದ ಪ್ರಿನ್ಸಿಪಲ್ ಸೆಕ್ರೆಟರಿ ರಾಜೇಶ್ ಪ್ರಸಾದ್ ದಂಪತಿಗಳ ಮನೆಯಲ್ಲಿ ಸೇವಾ ರೂಪದಲ್ಲಿ ನಡೆಯುವ ಪ್ರದರ್ಶನಕ್ಕೂ ಮೊದಲು ಸಂಜೆ 4 ಗಂಟೆಗೆ ಸತ್ಯನಾರಾಯಣ ಪೂಜೆ ನಡೆಯಲಿದೆ.
ರಾತ್ರಿ 8 ಗಂಟೆಯಿಂದ ಬಂದ ಎಲ್ಲಾ ಭಕ್ತರಿಗೆ ವಿಷೇಷ ಭೋಜನ ವ್ಯವಸ್ಥೆ ಮತ್ತು ಚಹಾ ತಿಂಡಿಯ ವ್ಯವಸ್ಥೆ ಇದೆ. ಸಾರ್ವಜನಿಕರು ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.