ಉಡುಪಿ: ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-
2024 ರ ಕುರಿತು ಸಾರ್ವಜನಿಕರಲ್ಲಿ ವಿಶೇಷವಾಗಿ ಯುವ ಮತದಾರರಲ್ಲಿ ಜಾಗೃತಿ ಮೂಡಿಸುವ ಕಿರುಚಿತ್ರ ನಿರ್ಮಿಸುವ ಸ್ಪರ್ಧೆಯನ್ನು
ಏರ್ಪಡಿಸಲಾಗಿದ್ದು, ಹೆಚ್ಚು ಆಕರ್ಷಕ ಮತ್ತು ವಿನೂತನವಾಗಿ ಚಿತ್ರಣಗೊಳ್ಳುವ 3 ಕಿರುಚಿತ್ರಗಳಿಗೆ ನಗದು ಬಹುಮಾನ ನೀಡಿ,
ಗೌರವಿಸಲಾಗುವುದು.
ಕಿರುಚಿತ್ರವು ಜಾಹಿರಾತು ಮಾದರಿಯಲ್ಲಿದ್ದು, 50 ಸೆಕೆಂಡ್ ಗಳಿಗಿಂತ ಕಡಿಮೆ ಇರಬೇಕು. ಕಾಪಿರೈಟ್ ಇರುವಂತಹ ಹಿನ್ನಲೆ ಸಂಗೀತ
ಬಳಸಬಾರದು. ಚಿತ್ರದಲ್ಲಿ ಯಾವುದೇ ಹಿಂಸಾತ್ಮಕ ಚಿತ್ರಗಳಿರಬಾರದು ಮತ್ತು ಸಾಹಿತ್ಯವು ಸಕಾರಾತ್ಮಕವಾಗಿರಬೇಕು. ಕಿರು ಚಿತ್ರದಲ್ಲಿ
ಶೀರ್ಷಿಕೆಗಾಗಿ ಹೆಚ್ಚು ಸಮಯ ವ್ಯರ್ಥ ಮಾಡದೆ ಕಿರುಚಿತ್ರ ಪ್ರದರ್ಶನವಾಗುವಾಗ ಕೆಳಗೆ ವಿವರ ನೀಡುವುದು ಹೆಚ್ಚು ಸೂಕ್ತವಾಗಿರುತ್ತದೆ.
ಆಯ್ಕೆಯಾದ ವಿಜೇತರಿಗೆ ಪ್ರಥಮ 10,000 ರೂ., ದ್ವಿತೀಯ ರೂ. 7,500 ರೂ. ಹಾಗೂ ತೃತೀಯ ರೂ. 5,000 ನಗದು
ಬಹುಮಾನ ನೀಡಲಾಗುವುದು.
ಕಿರುಚಿತ್ರವನ್ನು ನವೆಂಬರ್ 8 ರಂದು ಸಂಜೆ 5 ಗಂಟೆಯೊಳಗೆ ಇ-ಮೇಲ್ [email protected] ನಲ್ಲಿ
ಸಲ್ಲಿಸುವಂತೆ ಹಾಗೂ ಸಂಪರ್ಕ ಸಂಖ್ಯೆ ನೀಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಪ್ರಕಟಣೆ
ತಿಳಿಸಿದೆ.