ಉಡುಪಿ: ನಾನು ಸಚಿವ ಸ್ಥಾನಕ್ಕೆ ಆಸೆ ಪಡುವ ವ್ಯಕ್ತಿ ಅಲ್ಲ. ರಾಜ್ಯದ ಸಂಸದರ ಪೈಕಿ ನಾನು ಜೂನಿಯರ್. ರಾಜ್ಯದಿಂದ ಹಲವಾರು ಹಿರಿಯ ಸಂಸದರು ಆಯ್ಕೆಯಾಗಿದ್ದಾರೆ. ನಾನು ಸಚಿವ
ಸ್ಥಾನದ ಅಪೇಕ್ಷೆ ಪಡುವುದೂ ಇಲ್ಲ ಎಂದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಉಡುಪಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಎಲ್ಲ ಭಾಷೆಯನ್ನು ಕಲಿಯಲು ಮುಕ್ತ ಅವಕಾಶ ಕಲ್ಪಿಸಬೇಕು. ಹಿಂದಿ ಹೇರಿಕೆಗೆ ಆಕ್ಷೇಪ ಮಾಡುವವರು ರಾಜ್ಯದಲ್ಲಿ ಕನ್ನಡ ಕಡ್ಡಾಯ ಮಾಡಲಿ ನೋಡೋಣ. ಕನ್ನಡದ ಬೆಳವಣಿಗೆಗೆ ಆದ್ಯತೆ ನೀಡುವಂತಾಗಲಿ ಎಂದರು.
ಕನ್ನಡದ ಬೆಳವಣಿಗೆ ಆಗಿಲ್ಲ:
ಸಿದ್ದರಾಮಯ್ಯನವರ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕೊಟ್ಟಂತಹ
ಅನುದಾನವನ್ನು ಕನ್ನಡದ ಬೆಳವಣಿಗೆಗೆ ಬಳಕೆ ಮಾಡಿಲ್ಲ. ಅದನ್ನು ಅಮೆರಿಕಾ ಪ್ರವಾಸ
ಹೋಗಲು ವಿನಿಯೋಗಿಸಿದ್ದಾರೆ. ಇದಕ್ಕೆ ಮೊದಲು ಸಿದ್ದರಾಮಯ್ಯ ಉತ್ತರ ಕೊಡಲಿ. ಆ ನಂತರ
ಆಕ್ರೋಶ ವ್ಯಕ್ತಪಡಿಸಲಿ ಎಂದು ಟೀಕಿಸಿದರು.
ಗ್ರಾಮ ವಾಸ್ತವ್ಯದಿಂದ ಯಾವುದೇ ಅಭಿವೃದ್ಧಿ ಆಗಲ್ಲ. ಜನ ನಿಮಗೆ ಅಧಿಕಾರ
ಕೊಟ್ಟಿರುವುದು ಕೇವಲ ಗ್ರಾಮ ವಾಸ್ತವ್ಯ ಮಾಡುದಕ್ಕಲ್ಲ. ವಿಧಾನಸೌಧದಲ್ಲಿ
ಕುಳಿತುಕೊಂಡು ಕೆಲಸ ಮಾಡುವುದಕ್ಕೆ. ಆದರೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ
ಅವರು ವಿಧಾನಸೌಧದಲ್ಲಿ ಒಂದು ದಿನವೂ ಕುಳಿತುಕೊಳ್ಳಲ್ಲ. ಹೊಟೇಲ್ ವೆಸ್ಟ್
ಎಂಡ್ನಿಂದಲೇ ಆಡಳಿತ ನಡೆಸುತ್ತಾರೆ ಎಂದು ಲೇವಡಿ ಮಾಡಿದರು.