ಪಾಕಿಸ್ತಾನದ ಮಾಜಿ ವೇಗಿ ಅತ್ಯಂತ ವೇಗದ ಬೌಲರ್ ಎನ್ನುವ ಖ್ಯಾತಿ ಗಳಿಸಿದವರು.ಶೊಯೇಬ್ ಅಖ್ತರ್. ಗಂಟೆಗೆ 161.3 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ವೇಗದಲ್ಲೇ ಬ್ಯಾಟ್ಸ್ ಮೆನ್ ಗಳನ್ನು ಹೆದರಿಸಿದ ಖ್ಯಾತಿಯೂ ಅಖ್ತರ್ ಗಿದೆ. ಇವರ ಈ ಬೌಲಿಂಗ್ ದಾಖಲೆಯನ್ನು ಮುರಿಯಲು ಈ ವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ. ಇತ್ತೀಚೆಗೆ ಪಾಡ್ ಕಾಸ್ಟ್ ಒಂದರಲ್ಲಿ ನಿರೂಪಕ, ನಿಮ್ಮ ದಾಖಲೆಯನ್ನು ಯಾರಾದರೂ ಮುರಿಯಬಹುದಾ? ಆ ನಂಬಿಕೆ ನಿಮಗಿದ್ಯಾ ಎಂದು ಕೇಳಿದಕ್ಕೆ, ಖಂಡಿತ ನಂಗೆ ಆ ನಿರೀಕ್ಷೆ ಇದೆ. ಅಂತಹ ಪ್ರತಿಭೆ ಈಗಿನ ಯುವ ಬೌಲರ್ ಗಳಲ್ಲಿದೆ ಎಂದಿದ್ದಾರೆ ಅಖ್ತರ್
ಮುಂದುವರೆದು ನನಗೊಂದು ಅವಕಾಶ ಕೊಟ್ಟಲ್ಲಿ ಜಗತ್ತಿನಲ್ಲಿರುವ ಇಂತಹ ಬೌಲರ್ ಗಳನ್ನು ಹುಡುಕಿ,ತರಬೇತಿ ನೀಡಿ ಅವರಿಂದ ನನ್ನ ದಾಖಲೆಯನ್ನು ಮುರಿಸಬಲ್ಲೆ. ಇದು ಖಂಡಿತ ಸಾಧ್ಯ. ಬರೀ ಆರು ತಿಂಗಳಲ್ಲಿ ಈ ಕೆಲಸ ಮಾಡಿಸಿ ತೋರಿಸಬಲ್ಲೆ. ಅಂತಹ ಬೌಲರ್ ಗಳನ್ನು ರಾಶಿ ಹಾಕಿ ಐಸಿಸಿ ಮುಂದೆ ತಂದು ನಿಲ್ಲಿಸಿ ಅವರನ್ನು ಆಡಿಸುವಂತೆ ಶಿಫಾರಸ್ಸು ಮಾಡಿಸುತ್ತೇನೆ. ಹೀಗೆ ಮಾಡಿದ ಮೇಲೆ ಐಸಿಸಿ ನನ್ನ ಪಾದ ತೊಳೆದು ನೀರು ಕುಡಿಯಬೇಕು ಎಂದೂ ಅಖ್ತರ್ ಹೇಳಿರುವುದು ಅವರ ಅತೀಕೇಕವನ್ನು ತೋರಿಸುತ್ತದೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.