ಉಡುಪಿ: ಬನ್ನಂಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಾಗೂ ವಾರ್ಷಿಕ ರಥೋತ್ಸವ ಭಕ್ತಿ ಸಡಗರದಿಂದ ಸಂಪನ್ನವಾಯಿತು. ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ವಾಸುದೇವ ಉಪಾಧ್ಯಾಯ ಹಾಗೂ ಅರ್ಚಕ ವೃಂದ ಶತರುದ್ರಾಭಿಷೇಕ, ನವಕ ಪ್ರಧಾನ ಹೋಮ, ಎಳನೀರಿನ ಅಭಿಷೇಕ ನೆಡೆಸಿಕೊಟ್ಟರು.
ವಿವಿಧ ಭಜನಾ ತಂಡಗಳಿಂದ ಭಜನೆ ಹಾಗೂ ಸಾಮೂಹಿಕ ಶಿವ ಮಂತ್ರ ಪಠಣ ಜರಗಿತು. ವಿಶೇಷ ಹೂವಿನ ಅಲಂಕಾರ ಹಾಗೂ ಉತ್ಸವ ಬಲಿ, ರಥೋತ್ಸವ, ವಸಂತಪೂಜೆ, ಪ್ರಸಾದ ವಿತರಣೆ, ಮನೋರಂಜನಾ ಕಾರ್ಯಕ್ರಮ ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ರಾಮ್ ಬನ್ನಂಜೆ ನಗರ ಸಭಾ ಸದಸ್ಯೆ ಸವಿತಾ ಹರೀಶ್ ರಾಮ್, ಟಿ ಜಿ ಹೆಗ್ಡೆ , ಸಮಿತಿ ಸದಸ್ಯರಾದ ಸುರೇಶ ಸೇರಿಗಾರ, ವಿಠಲ್ ಶೆಟ್ಟಿ, ದಯಾನಂದ ಕಲ್ಮಾಡಿ, ಭುಜಂಗ ಶೆಟ್ಟಿ, ಸುಧಾಕರ್ ಮಲ್ಯ, ಅನುಪಮಾ ಆನಂದ ಸುವರ್ಣ, ಅಶ್ವಿನಿ ಶೆಟ್ಟಿ, ರವಿ ಭಟ್ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.