ಶಿವಪಾಡಿ: ಅತ್ರಿರುದ್ರಮಾಹಾಯಾಗದ ಇಂದಿನ ಧಾರ್ಮಿಕ ಸಭಾ ಕಾರ್ಯಕ್ರಮಗಳು

ಶಿವಪಾಡಿ: ಶ್ರೀ ಉಮಾಮಹೇಶ್ವರ ದೇವಸ್ಥಾನ ಅತಿರುದ್ರಮಹಾಯಾಗದ ಪ್ರಯುಕ್ತ ಫೆ.22 ರಿಂದ 12 ದಿನಗಳ ಕಾಲ ಜರಗುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಂಜೆ 5 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದ್ದು, ಫೆ.23 ರಂದು ಸಂಜೆ 5 ರಿಂದ ಬಾಲವಾಗ್ಮಿ ಕು.ಹಾರಿಕಾ ಮಂಜುನಾಥ್ ಇವರಿಂದ ಉಪನ್ಯಾಸ ಹಾಗೂ ಸಂಜೆ 7 ರಿಂದ ವಿದುಷಿ ಉಮಾಶಂಕರಿ ಮತ್ತು ಬಳಗದವರಿಂದ ಭಕ್ತಿ ಸಂಗೀತ, ಆಬಳಿಕ ಶ್ರೀಮತಿ ಪ್ರತಿಮಾ ಕೋಡೂರು ಮತ್ತು ಬಳಾಗದವರಿಂದ ದಕ್ಷಯಜ್ಞ ಹರಿಕಥಾ ವಾಚನ ನಡೆಯಲಿದೆ.

ಫೆ.24 ಶುಕ್ರವಾರ ಸಂಜೆ 5 ರಿಂದ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಸೂರ್ಯನಾರಾಯಣ್ ಭಟ್ ಕಶೆಕೋಡಿ ಇವರಿಂದ ಧಾರ್ಮಿಕ ಉಪನ್ಯಾಸ ಹಾಗೂ ಸಂಗೆ 7 ರಿಂದ ತುಳುನಾಡ ಗಂಧರ್ವ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದವರಿಂದ “ಶಿವಗಾನಾಮೃತ” ನಡೆಯಲಿದೆ ಎಂದು ಅತಿರುದ್ರಮಹಾಯಾಗ ಸಮಿತಿಯ ಪರವಾಗಿ ಮಹೇಶ ಠಾಕೂರ್ ತಿಳಿಸಿದ್ದಾರೆ.