ಉಡುಪಿ: ಸನಾತನ ಹಿಂದೂ ಧರ್ಮದ ಬಗ್ಗೆ ಎಲ್ಲೂ ರಾಜಿ ಮಾಡಿಕೊಳ್ಳದೆ ಹಿಂದೂ ಧರ್ಮದ ಉಳಿವಿಗಾಗಿ ಅವಿರತ ಹೋರಾಟ ನಡೆಸಿದ ಶಿವಾಜಿ ಮಹಾರಾಜ್ ಇಂದಿನ ಯುವ ಜನಾಂಗಕ್ಕೆ ಆದರ್ಶ ಪ್ರಾಯರಾಗಿದ್ದಾರೆ ಎಂದು ಉಡುಪಿ ಛತ್ರಪತಿ ಶಿವಾಜಿ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಹಾಗೂ ವಕೀಲ ದಿನೇಶ್ ಸಿ. ನಾಯ್ಕ್ ಹೇಳಿದ್ದಾರೆ.
ಉಡುಪಿ ಛತ್ರಪತಿ ಶಿವಾಜಿ ವಿವಿದೋದ್ದೇಶ ಸಹಕಾರ ಸಂಘ ಪ್ರಧಾನ ಕಚೇರಿಯಲ್ಲಿ ತಿಥಿಯನುಸಾರ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿವಾಜಿ ಜಯಂತಿಯನ್ನು ಸರಕಾರ ಹಾಗೂ ಸಂಘ ಸಂಸ್ಥೆಗಳು ತಿಥಿಯನುಸಾರ ಆಚರಣೆ ಮಾಡಲು ಮುಂದಾಗಬೇಕು ಎಂದರು.
ಬೆಂಗಳೂರಿನ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ ಎಸ್ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲೂ ಶಿವಾಜಿ ಜಯಂತಿಯನ್ನು ಆಚರಿಸುವ ಮೂಲಕ ಛತ್ರಪತಿ ಶಿವಾಜಿ ವಿವಿದೋದ್ದೇಶ ಸಹಕಾರ ಸಂಘ ಇತರ ಸಹಕಾರಿಗೆ ಮಾದರಿಯಾಗಿದ್ದಾರೆ ಎಂದರು.
ಮಣಿಪಾಲ ಸಾರಸ್ವತ ಸೌಹಾರ್ದ ಸಹಕಾರಿ ಸಿಇಓ ಭುವನೇಶ ಪ್ರಭು, ಉಡುಪಿ ಸೌಹಾರ್ದ ಸಹಕಾರಿ ಒಕ್ಕೂಟದ ಸಿಇಓ ಲೋಹಿತ್ ಸಾಲಿಯಾನ್, ಮೀನು ಮಾರಾಟಗಾರರ ಸೌಹಾರ್ದ ಸಹಕಾರಿ ಸಿಇಓ ಪ್ರಕಾಶ್ ಸುವರ್ಣ ಕಟಪಾಡಿ, ಅನಂತ ಪದ್ಮನಾಭ ಸಹಕಾರ ಶಾಖಾ ವ್ಯವಸ್ಥಾಪಕ ಕಿರಣ್, ಮುಳ್ಳಿಕಟ್ಟೆ ಶಾಲಾ ಶಿಕ್ಷಕಿ ಸಾವಿತ್ರಿ ಕೆ, ಲತಾ ಹಾಗೂ ಸಿಬ್ಬಂದಿಗಳು, ಸದಸ್ಯರು ಉಪಸ್ಥಿತರಿದ್ದರು.
ಛತ್ರಪತಿ ಶಿವಾಜಿ ವಿವಿದೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಪ್ರಶಾಂತ್ ನಿರೂಪಿಸಿ ವಂದಿಸಿದರು.












