ಕಾಪು: ಶಿರ್ವಾದ ಪೇಟೆಯ ರಸ್ತೆಯ ಬದಿಯ ಅಂಗಡಿಯೊಂದರ ಮುಂಭಾಗದ ಕಂಬಕ್ಕೆ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಮಟ್ಟಾರು ನಿವಾಸಿ ಅಕ್ಷತ್ ಪೂಜಾರಿ (35) ಎಂದು ಗುರುತಿಸಲಾಗಿದೆ.
ಈತ ವಿಪರೀತ ಮದ್ಯಸೇವನೆಯ ಚಟಕ್ಕೆ ಬಿದ್ದಿದ್ದು, ಇದರಿಂದಲೇ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಈತ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಿಗ್ಗೆಯ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಿರ್ವಾ ಪೊಲೀಸರು ತಿಳಿಸಿದ್ದಾರೆ.












