ಶಿರ್ವಾ:ಹಿಂದೂ ಪಿ.ಯು.ಕಾಲೇಜು ಮತ್ತು ಜ್ಞಾನ ಚೇತನಾ ಎಜುಕೇಷನ್ ಟ್ರಸ್ಟ್ ಆಶ್ರಯದಲ್ಲಿ ಜ್ಞಾನ ಸಂಭ್ರಮ ಪ್ರತಿಭಾ ದಿನಾಚರಣೆ ಕಾರ್ಯಕ್ರಮ ವಿದ್ಯಾವಧ೯ಕ ಆವರಣದಲ್ಲಿ ಜರುಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಜ್ಞಾನ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಂತಾರ ಹಾಗೂ ಅದರ ಪ್ರಿಕ್ವೆಲ್ ನಲ್ಲಿ ನಟಿಸಿದ್ದ ನಟಿ ಪ್ರತಿಮಾ ನಾಯಕ್ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಅನನ್ಯವಾಗಿದ್ದು ಈ ನಿಟ್ಟಿನಲ್ಲಿ ಜ್ಞಾನ ಸಂಭ್ರಮ ಕಾರ್ಯಕ್ರಮವೊಂದು ಉತ್ತಮ ಮಾದರಿ ಕಾರ್ಯಕ್ರಮವಾಗಿ ನಿಲ್ಲುತ್ತದೆ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಗುರುಪ್ರಸಾದ್ ಅಕಾಡೆಮಿಕ್ ಡೀನ್ ಸತೀಶ್ ಹೆಗ್ಡೆ, ಜ್ಞಾನ ಚೇತನಾ ಟ್ರಸ್ಟ್ ಸದಸ್ಯ ಸುಂದರ ಮೆರಾ, ಪ್ರಾಂಶುಪಾಲ ಹಿಂದೂ ಪಿ.ಯು.ಕಾಲೇಜು ನೀಷಾ ಶೆಟ್ಟಿ ಪ್ರಭಾರ ಪ್ರಾಂಶುಪಾಲೆ ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರೇೂಪ ಸಮಾರಂಭಸಂಜೆ ಸಮಾಪನ ಗೊಂಡು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಖ ನೃತ್ಯ ಗೀತೆ ನಾಟಕ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ವೀಕ್ಷಕರ ಮನಸೆಳೆಯಿತು.












