ಎನ್ ಡಿಎ ಮೈತ್ರಿಕೂಟದಿಂದ ಹೊರಬಂದ ಶಿರೋಮಣಿ ಅಕಾಲಿದಳ

ನವದೆಹಲಿ: ಶಿರೋಮಣಿ ಅಕಾಲಿದಳ (ಎಸ್‌ಎಡಿ) ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಜತೆಗಿನ ಸುದೀರ್ಘ ಕಾಲದ ಸಂಬಂಧವನ್ನು ಕಡಿದುಕೊಂಡಿದೆ.

ಕೇಂದ್ರ ಸರ್ಕಾರದ ಕೃಷಿ ಮಸೂದೆಗೆ ಶಿರೋಮಣಿ ಅಕಾಲಿ ದಳ ವಿರೋಧ ವ್ಯಕ್ತಪಡಿಸಿದ್ದು, ಅದೇ ವಿಚಾರವಾಗಿ ಪಕ್ಷದ ನಾಯಕಿ ಹರ್ಸಿಮ್ರತ್‌ ಕೌರ್‌ ಕೇಂದ್ರ ಸಚಿವ ಸ್ಥಾನಕ್ಕೆ ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ್ದರು.

ಎನ್‌ಡಿಎ ಜತೆಗಿನ ಮೈತ್ರಿ ಕಡಿದುಕೊಂಡ ಬಗ್ಗೆ ಪಕ್ಷದ ಅಧ್ಯಕ್ಷ ಸುಖ್ಬಿರ್‌ ಸಿಂಗ್‌ ಬಾದಲ್‌ ಶನಿವಾರ ಘೋಷಿಸಿದರು. ಈ ಬಗ್ಗೆ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಒಮ್ಮತದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.

ಶಿವಸೇನಾ ಮತ್ತು ಟಿಡಿಪಿ ನಂತರ ಎನ್‌ಡಿಎ ಕೂಟದಿಂದ ಹೊರ ಬರುತ್ತಿರುವ ಪ್ರಮುಖ ಪಕ್ಷ ಎಸ್‌ಎಡಿ. ಇದು ಬಿಜೆಪಿಯ ಅತ್ಯಂತ ಹಳೆಯ ಮೈತ್ರಿ ಪಕ್ಷವೂ ಆಗಿದೆ.