ಶಿರಿಯಾರ ಗ್ರಾಮ ಪಂಚಾಯತ್‌ನ ವಠಾರದಲ್ಲಿ ಬಿದ್ದ ಮರ ತೆರವುಗೊಳಿಸಿ, ವಿದ್ಯುತ್ ಸಂಪರ್ಕ: ಮೆಸ್ಕಾಂ ಗೆ ನ್ಯಾಯವಾದಿ ಶಿರಿಯಾರ ಪ್ರಭಾಕರ ನಾಯಕ್  ಅಭಿನಂದನೆ

ಉಡುಪಿ : ಕೋಟ ಹೋಬಳಿ ವ್ಯಾಪ್ತಿಯ ಶಿರಿಯಾರ ಗ್ರಾಮ ಪಂಚಾಯತ್‌ನ ಕಲಮರ್ಗಿ – ತಾಂಗಂಡಿ, ಶ್ರೀ ರಾಮ ಮಂದಿರ ಹತ್ತಿರ ಪಿಡ್ಲೂಡಿ ರಾಜ್ಯ ಹೆದ್ದಾರಿಯ ಮೇಲೆ ಬುಡ ಸಹಿತ ಮರ ಉರುಳಿ ಕೆಇಬಿ ಹೈ ಟೆಸ್ಷನ್ ವಾಯರ್, ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ಶುಕ್ರವಾರ ರಾತ್ರಿ ಶಿರಿಯಾರ- ಕಲಮರ್ಗಿ ಸುತ್ತಮುತ್ತ ವಿದ್ಯುತ್ ಸಂಪರ್ಕ ಸ್ಥಗಿತಾ ಕೊಂಡು ಕತ್ತಲಲ್ಲಿ ಮುಳುಗಿತ್ತು.

ಬಳಿಕ ಕೆಲವು  ತಾಸು ಸ್ಥಳೀಯ ಸ್ವಯಂಸೇವಕರ ಸಹಕಾರದೊಂದಿಗೆ ಕಾರ್ಯಚರಣೆ ನಡೆಸಿ ರಸ್ತೆಗುರುಳಿದ ಮರವನ್ನು ತೆರೆವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಲಾಯಿತು.

ಮರುದಿನ ಮೆಸ್ಕಾಂ ಇಂಜಿನಿಯರ್ ವೈಭವ್ ಶೆಟ್ಟಿ ನೇತ್ರತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ  ಮೆಸ್ಕಾ ಕಾರ್ಯ ಸಾಧಿಸಿರುವುದಕ್ಕೆ ಶಿರಿಯಾರ ಗ್ರಾಮ ಪಂಚಾಯತ್ ಮಾಜಿ ಉಪಾದ್ಯಾಕ್ಷ, ಸ್ಥಳಿಯ ನ್ಯಾಯವಾದಿ ಮತ್ತು ನೋಟರಿ ಶಿರಿಯಾರ ಪ್ರಭಾಕರ ನಾಯಕ್  ಮೆಸ್ಕಾಂ ಗೆ ಅಭಿನಂದನೆ ಸಲ್ಲಿಸಿದ್ದಾರೆ.