ಕುಂದಾಪುರ : ಆಲ್ ಇಂಡಿಯಾ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ನಡೆಸಿದ ಮ್ಯಾಟ್ ಪರೀಕ್ಷೆಯಲ್ಲಿ ಇಲ್ಲಿನ ಶಿಕ್ಷ ಪ್ರಭಾ ಅಕಾಡೆಮಿ ವಿದ್ಯಾರ್ಥಿಗಳಾದ ರಕ್ಷಿತ್ ಮತ್ತು ರಿತೇಶ್ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಮ್ಯಾಟ್ ಪಿ.ಜಿ.ಸಿ.ಇ.ಟಿ ತೇರ್ಪಡೆ ಹೊಂದಿದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಬ್ಯಾಂಕುಗಳ ಸಹಯೊಗದೊಂದಿಗೆ ಶೈಕ್ಷಣಿಕ ಸಾಲ ಸೌಲಭ್ಯ ಕೂಡ ಒದಗಿಸಲಾಗುತ್ತಿದೆ.
ಪರೀಕ್ಷೆಗೆ ಮಾರ್ಗದರ್ಶನ
ಶಿಕ್ಷ ಪ್ರಭಾ ಸಂಸ್ಥೆಯಲ್ಲಿ ಸಿಎ, ಸಿಎಸ್, ಸಿಎಂಎ ಜತೆಗೆ ಬ್ಯಾಂಕಿಂಗ್ ಮತ್ತು ಎಂಬಿಎ ಪ್ರವೇಶ ಪರೀಕ್ಷೆಗೂ ರಾಜ್ಯದ ನಾನಾ ಭಾಗಗಳ ಉತ್ತಮ ಶಿಕ್ಷಕರ ಸೇವೆ ವಿದ್ಯಾರ್ಥಿಗಳಿಗೆ ದೊರಕುತ್ತಿದ್ದು, ನಿಯಮಿತ ವಿದ್ಯಾರ್ಥಿಗಳ ಬ್ಯಾಚಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಪ್ರಯೋಗಾತ್ಮಕವಾಗಿ ಶಿಕ್ಷಣ ನೀಡುತ್ತಿರುವುದರಿಂದ ಉತ್ತಮ ಫಲಿತಾಂಶಕ್ಕೆ ಸಹಕಾರಿಯಾಗುತ್ತಿದೆ. ನಿರಂತರವಾಗಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯ ಜೊತೆಗೆ ಸಂಸ್ಥೆಯು ಹೊರತಂದಿರುವ ಅಧ್ಯಯನ ಸಾಮಗ್ರಿ ನೀಡುತ್ತಿರುವುದು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಕುಂದೇಶ್ವರ ದೇವಸ್ಥಾನ ರಸ್ತೆಯ ಉತ್ತಮ ಕ್ಲಿನಿಕ್ ಕಟ್ಟಡದ ಎರಡನೇ ಮಹಡಿಯಲ್ಲಿರುವ ಸಂಸ್ಥೆಯ ಕಚೇರಿಗೆ ಭೇಟಿ ನೀಡಬಹುದು ಎಂದು ಸಂಸ್ಥೆಯ ಮುಖ್ಯಸ್ಥ ಪ್ರತಾಪ್ ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿ ತಿಳಿಸಿದ್ದಾರೆ.