ಕುಂದಾಪುರ: ಕುಂದೇಶ್ವರ ದೇವಸ್ಥಾನ ರಸ್ತೆಯ ಉತ್ತಮ ಕ್ಲಿನಿಕ್ ಬಿಲ್ಡಿಂಗ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಿಎ/ಸಿಎಸ್/ಸಿಎಂಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆ ಮತ್ತು ಜುವೆಲ್ಲರಿ ಅಸೋಸಿಯೇಷನ್ಸ್ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಜಿ.ಎಸ್.ಟಿ ಮತ್ತು ಕಂಪ್ಯೂಟರ್ ಮಾಹಿತಿ ಕಾರ್ಯಾಗಾರ ತರಬೇತಿ ನಡೆಯಿತು.
ಶಿಕ್ಷ ಪ್ರಭಾ ಅಕಾಡೆಮಿಯ ಪ್ರಾಧ್ಯಾಪಕ ಸಿಎ ಅರುಣ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ, ಜಿ.ಎಸ್.ಟಿ ಹೊಂದಿರುವ ವರ್ತಕರು ತಮ್ಮ ಖರೀದಿ ಮತ್ತು ಮಾರಾಟದ ಮೇಲೆ ಜಿ.ಎಸ್.ಟಿ.ಯನ್ನು ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವ ಕುರಿತು ಮಾಹಿತಿ ನೀಡಿದರು.
ಈ ಕಾನೂನನ್ನು ದೇಶಾದಾದ್ಯಂತ ಜಾರಿಮಾಡಬೇಕೆಂದು ಕಳೆದ ಐವತ್ತು ವರ್ಷಗಳಿಂದ ಪ್ರಯತ್ನ ನಡೆಯುತ್ತಾ ಬಂದಿದೆ. ಆದರೆ ನರೇಂದ್ರ ಮೋದಿ ನೇತೃತ್ವದ ಸರಕಾರ ಇಂತಹ ನಿರ್ಧಾರವನ್ನು ಕೈಗೊಂಡಿದೆ. ಅದರಲ್ಲಿ ಸಣ್ಣಪುಟ್ಟ ಗೊಂದಲಗಳು ಇಂದಿಗೂ ವ್ಯಾಪಾರಸ್ಥರಲ್ಲಿ ಇರುವುದು ಸಹಜ. ಮುಂದಿನ ದಿನಗಳಲ್ಲಿ ಇದು ನಿವಾರಣೆಯಾಗಿ ದೇಶದಲ್ಲಿ ಒಳ್ಳೆಯ ಬೆಳವಣಿಗೆ ಆಗುವ ಪರಿಸ್ಥಿತಿಯನ್ನು ನಾವು ಎದುರು ನೋಡಬೇಕಾಗುತ್ತದೆ ಎಂದರು.
ಸಂಸ್ಥೆಯ ಮುಖ್ಯಸ್ಥ ಭರತ್ ಶೆಟ್ಟಿ, ವಿದ್ಯಾರ್ಥಿಗಳು ಮತ್ತು ಸಮಾಜದ ಹಿತದೃಷ್ಟಿಯಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲು ಸಂಸ್ಥೆ ಯಾವಾಗಲೂ ಉತ್ಸುಕವಾಗಿದೆ ಎಂದರು.
ಜುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ ಬಿ. ಸತೀಶ್ ಶೇಟ್ ಮತ್ತು ಕಾರ್ಯದರ್ಶಿ ಎಚ್. ಸತೀಶ್ ಆಚಾರ್ಯ ಉಪಸ್ಥಿತರಿದ್ದರು.
ಶಿಕ್ಷ ಪ್ರಭಾ ಸಂಸ್ಥೆಯ ಶಿಲ್ಪ ನಾಯ್ಕ್ ಕಂಪ್ಯೂಟರ್ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ಅಂಕಿತಾ ಶೆಟ್ಟಿ ನಿರೂಪಿಸಿ, ವೈಷ್ಣವಿ ಎಂ.ವಿ. ಸ್ವಾಗತಿಸಿ, ಅಖಿಲಾ ಹೆಬ್ಬಾರ್ ವಂದಿಸಿದರು