ಕುಂದಾಪುರ: ಕುಂದೇಶ್ವರ ದೇವಸ್ಥಾನ ರಸ್ತೆಯ ಉತ್ತಮ್ ಕ್ಲಿನಿಕ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (SPACE) CA/CS/CMA – Banking ತರಬೇತಿ ಸಂಸ್ಥೆ ಇನ್‌ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರಿ ಇಂಡಿಯಾ ಅವರು ಡಿ. 28 ಹಾಗೂ 29 ರಂದು ನಡೆಸಿದ ( CS Foundation) ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದಿದೆ.
ಸಂಸ್ಥೆಯ ವಿದ್ಯಾರ್ಥಿನಿಯಾದ ಅರ್ಪಿತಾ (252) ಹಾಗೂ ವೇನಿಷಾ ಶೇರಿನ್ ಲೋಬೋ (256) ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರುತ್ತಾರೆ.
ಸಂಸ್ಥೆಯ ಪ್ರಥಮ ಬ್ಯಾಚ್‌ನಲ್ಲಿ ಶೇ.100 ಫಲಿತಾಂಶ ಪಡೆದಿರುವುದು ಹೆಮ್ಮೆ ತರುವಂತಹ ವಿಷಯ. ವಿದ್ಯಾರ್ಥಿಗಳ ಮೇಲೆ ವಯಕ್ತಿಕ ಏಕಾಗ್ರತೆಗೆ ತುಂಬಾ ಪ್ರಾಮುಖ್ಯತೆಯನ್ನು ಸಂಸ್ಥೆ ನೀಡುತ್ತದೆ. ಇದು ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಸಂಸ್ಥೆಯಲ್ಲಿ ೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂ ಮತ್ತು ಅSನ ವಿವಿಧ ಹಂತದ ಪರೀಕ್ಷೆಯನ್ನು ಈಗಾಗಲೇ ಪಡೆದುಕೊಂಡಿದ್ದು ಅದರಲ್ಲೂ ಕೂಡ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಜೊತೆಗೆ ಸಂಸ್ಥೆಯಲ್ಲಿರುವ ಉತ್ತಮ ಭೋದಕ ಸಿಬ್ಬಂದಿಗಳು ಹಾಗೂ ಸಂಸ್ಥೆ ನಿರಂತರವಾಗಿ ನಡೆಸುವ ಪೂರ್ವ ತಯಾರಿ ಪರೀಕ್ಷೆ ಉತ್ತಮ ಫಲಿತಾಂಶಕ್ಕೆ ಕಾರಣವಾಗಿದೆ. ಸಂಸ್ಥೆಯ ತರಬೇತಿ ಮತ್ತು ಹೆಚ್ಚಿನ ಮಾಹಿತಿಗಾಗಿ ಕುಂದೇಶ್ವರ ದೇವಸ್ಥಾನ ರಸ್ತೆಯ ಉತ್ತಮ್ ಕ್ಲಿನಿಕ್ ಕಟ್ಟಡದ ಎರಡನೇ ಮಹಡಿಯಲ್ಲಿರುವ ಸಂಸ್ಥೆಗೆ ಭೇಟಿ ನೀಡಬಹುದು ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.