ಸ್ಪರ್ಧಾತ್ಮಕ ಪರೀಕ್ಷೆಗಳಿಗೆ “ಶಿಕ್ಷ ಪ್ರಭಾ” ಅಕಾಡೆಮಿಯಿಂದ ಗುಣಮಟ್ಟದ ಶಿಕ್ಷಣ: ರಜಾದಿನಗಳಲ್ಲಿ ಸ್ಪೆಷಲ್ ಬ್ಯಾಚ್

ಕುಂದಾಪುರ:ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕುಂದಾಪುರದ ಶಿಕ್ಷ ಪ್ರಭಾ ಅಕಾಡೆಮಿಯಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ವಿದ್ಯಾರ್ಥಿಗಳ ಬದುಕು ಕಟ್ಟುವಲ್ಲಿ ಸ್ಪೂರ್ತಿಯಾಗಿದೆ.

ಕುಂದಾಪುರ ಕುಂದೇಶ್ವರ ದೇವಸ್ಥಾನ ರಸ್ತೆಯ ಉತ್ತಮ ಕ್ಲಿನಿಕ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಸಂಸ್ಥೆಯು ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ತರಬೇತಿ ನೀಡುವಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದೆ.  ಸಂಸ್ಥೆಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಬೆಂಗಳೂರು, ಮುಂಬೈ ನಗರಗಳಲ್ಲಿ ದೊರಕುವಂತಹ ಆಧುನಿಕ ತಂತ್ರಜ್ಞಾನ ಆಧಾರಿತ ಗುಣಮಟ್ಟದ ಶಿಕ್ಷಣವನ್ನು ಕುಂದಾಪುರ ದಂತಹ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ದೊರಕುವಂತಾಗಬೇಕು ಎನ್ನುವ ಉದ್ದೇಶದಿಂದ CET/NEET/ JEE-MAIN ವಿದ್ಯಾರ್ಥಿಗಳಿಗೆ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ನಂತರದ ರಜಾದಿನದಲ್ಲಿ Vacation Batch ಕ್ಲಾಸನ್ನು ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಈಗಾಗಲೇ ಸಂಸ್ಥೆಯಿಂದ ತರಬೇತಿ ಪಡೆಯಲು ಉತ್ಸುಕರಾಗಿದ್ದಾರೆ.

ಉಪನ್ಯಾಸಕರ ಮಾರ್ಗದರ್ಶನ:
ಮೂಡಬಿದ್ರೆ ಆಳ್ವಾಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲರಾಗಿರುವ ಕುಂದಾಪುರ ಮೂಲದ ಪ್ರೋ| ರಮೇಶ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಶಿಕ್ಷ ಪ್ರಭಾ ಅಕಾಡೆಮಿಯಲ್ಲಿ ವಿಜ್ಞಾನ ವಿಭಾಗದ ತರಬೇತಿಗಳು ನಡೆಯುತ್ತವೆ. ಪ್ರೋ| ರಮೇಶ್ ಶೆಟ್ಟಿ ಅವರು ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ತನ್ನ ವೃತ್ತಿ ಬದುಕನ್ನು ಭೌತಶಾಸ್ತ್ರ ವಿಭಾಗದಲ್ಲಿ ಆರಂಭಿಸಿ ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕರಾಗಿ ಹೊರಹೊಮ್ಮಿದ್ದಾರೆ, ನಂತರ ಅವರ ಸೇವೆ ಉಡುಪಿಯ ಪಿ.ಪಿ.ಸಿ. ಕಾಲೇಜಿನಲ್ಲಿ ಮುಂದುವರೆದು ಭೌತಶಾಸ್ತ್ರ ವಿಭಾಗದಲ್ಲಿ ತನ್ನ ಚಾಪನ್ನು ಮೂಡಿಸುತ್ತಾ ಕಳೆದ ಸುಮಾರು 10 ವರ್ಷಗಳಿಂದ ಮೂಡುಬಿದಿರೆ ಆಳ್ವಾಸ್ ಪಿ.ಯು. ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಾ ರಾಜ್ಯದ ಶ್ರೇಷ್ಠ ಭೌತಶಾಸ್ತ್ರ ಪ್ರಾಧ್ಯಾಪಕರ ಸಾಲಿನಲ್ಲಿ ತಮ್ಮನ್ನು ಗುರುತಿಸಿಕೊಂಡಿರುತ್ತಾರೆ. ಇಂತಹ ಅನುಭವಿ ಶಿಕ್ಷಕರ ಮಾರ್ಗದರ್ಶನದಲ್ಲಿ ರಾಜ್ಯದ ನಾನಾ ಭಾಗಗಳ ಅನುಭವಿ ಶಿಕ್ಷಕರ ನೇತೃತ್ವದಲ್ಲಿ ಶಿಕ್ಷ ಪ್ರಭಾ ಅಕಾಡೆಮಿಯಲ್ಲಿ ವಿಜ್ಞಾನ ವಿಭಾಗದ ತರಗತಿಗಳು ಆರಂಭಗೊಂಡಿದೆ.

Vacation Batch ಗೆ ನೊಂದಣಿ ಆರಂಭ:
CET/NEET/JEE-MAIN ಗೆ Crash Course ತರಬೇತಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಪಡೆದ ವಿದ್ಯಾರ್ಥಿಗಳಿಗೆ ಮಾರ್ಚ್ 26, 2020 ರಿಂದ ಆರಂಭಗೊಳ್ಳಲಿದೆ. Crash Course ತರಗತಿಗಳನ್ನು ರಾಜ್ಯದ ನಾನಾ ಭಾಗದ ಅನುಭವಿ ಶಿಕ್ಷಕರು ನಡೆಸಿಕೊಡಲಿದ್ದು, ವಿದ್ಯಾರ್ಥಿಗಳಿಗೆ ಪ್ರತ್ಯೇಕ
Study Material ಅನ್ನು ಸಂಸ್ಥೆ ಹೊರತಂದಿದ್ದು, ಇದು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಹಕಾರಿಯಾಗಿದೆ. Crash Course ಗೆ ಹಾಜರಾದ ವಿದ್ಯಾರ್ಥಿಗಳಿಗೆ Study Material ಉಚಿತವಾಗಿ ನೀಡಲಾಗುತ್ತದೆ. ದ್ವಿತೀಯ ಪಿಯುಸಿ Vacation ತರಗತಿಗಳೂ ಕೂಡ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಆರಂಭವಾಗಲಿದ್ದು, ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಆರಂಭವಾಗಲಿದೆ. Vacation ಬ್ಯಾಚ್ ನಲ್ಲಿ ದ್ವಿತೀಯ ಪಿಯುಸಿ ಪಠ್ಯ ಮತ್ತು CET/NEET ತರಗತಿಗಳನ್ನು ಒಳಗೊಂಡಿರುತ್ತದೆ. ಪ್ರತಿ ತರಗತಿಯು 40 ವಿದ್ಯಾರ್ಥಿಗಳಿಗೆ ಸೀಮಿತವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕುಂದೇಶ್ವರ ದೇವಸ್ಥಾನ ರಸ್ತೆಯ ಉತ್ತಮ ಕ್ಲಿನಿಕ್ ಕಟ್ಟಡದ ಶಿಕ್ಷ ಪ್ರಭಾ ಅಕಾಡೆಮಿಗೆ ಭೇಟಿ ನೀಡಬಹುದು ಎಂದು ಸಂಸ್ಥೆಯ ಮುಖ್ಯಸ್ಥರಾದ ಭರತ್ ಶೆಟ್ಟಿ ಮತ್ತು ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಸಂಪರ್ಕಿಸಬಹುದು.