ತನ್ನನ್ನು ಅಶ್ಲೀಲ ಕಮೆಂಟ್ ಗಳ ಮೂಲಕ ನಿಂದಿಸಿರೋ ದರ್ಶನ್ ಅಭಿಮಾನಿಗಳಿಂದ ತನ್ನ ವ್ಯಕ್ತಿತ್ವಕ್ಕೆ ನೋವಾಗಿದೆ ಮಾನಸಿಕವಾಗಿ ಕಿರುಕುಳ ಅನುಭವಿಸುತ್ತಿದ್ದೇನೆ ಎಂದು ರಮ್ಯಾ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ. ಈ ಕುರಿತು ಇದೀಗ ದೊಡ್ಡ ಮಟ್ಟದ ಚರ್ಚೆ ಟೀಕೆಗಳು ದರ್ಶನ್ ಅಭಿಮಾನಿಗಳ ವಿರುದ್ದವಾಗಿ ಕೇಳಿಬರುತ್ತಿರುವ ಬೆನ್ನಲ್ಲೇ ನಟ ಶಿವರಾಜ್ ಕುಮಾರ್ ಕೂಡಾ ರಮ್ಯಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಮ್ಯಾ- ದರ್ಶನ್ ಫ್ಯಾನ್ಸ್ ಕಮೆಂಟ್ ಜಟಾಪಟಿಯಲ್ಲಿ ರಮ್ಯಾ ಪರ ಶಿವರಾಜ್ ಕುಮಾರ್ ದಂಪತಿ ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ. ರಮ್ಯಾ ವಿರುದ್ದ ಬಳಸಿರುವ ಪದ ಖಂಡನೀಯ ಎಂದು ಹೇಳಿದ್ದಾರೆ.
ಮಹಳೆಯರನ್ನು ಗೌರವಿಸುವುದನ್ನು ಕಲಿಯಬೇಕು. ಸೋಷಿಯಲ್ ಮೀಡಿಯಾ ತುಂಬಾ ಬಲಿಷ್ಟವಾದ ಅಸ್ತ್ರ. ಅವಾಚ್ಯ ಪದಗಳಿಂದ ನಿಂದಿಸಿ ದ್ವೇಷ ಅಸೂಯೆ ಬಿತ್ತಬಾರದು. ನಾವು ಸದಾ ರಮ್ಯಾ ಜೊತೆ ನಿಲ್ಲತ್ತೇವೆ ಎಂದು ರಮ್ಯಾಗೆ ಬೆಂಬಲವಾಗಿ ಶಿವಣ್ಣ ಪೋಸ್ಟ್ ಹಾಕಿದ್ದಾರೆ.
ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ. ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ; ಅದನ್ನು ನಾವು ಸಹಿಸಬಾರದು. ಮಹಿಳೆಯರನ್ನು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ ಮತ್ತು ಮೊಟ್ಟಮೊದಲು ಒಬ್ಬ ವ್ಯಕ್ತಿಯಾಗಿ ಗೌರವಿಸುವುದು ತುಂಬಾ ಮುಖ್ಯ.
ಸೋಶಿಯಲ್ ಮೀಡಿಯಾ ತುಂಬಾ ಬಲಿಷ್ಠವಾದ ಅಸ್ತ್ರ, ಅದನ್ನು ತಮ್ಮ ಏಳಿಗೆಗಾಗಿ ಬಳಸಬೇಕೇ ಹೊರತು, ಅವಾಚ್ಯ ಶಬ್ದಗಳಿಂದ ನಿಂದಿಸಿ, ದ್ವೇಷ-ಅಸೂಯೆಯನ್ನು ಬಿತ್ತಲು ಬಳಸಬಾರದು. ನಿಮ್ಮ ನಿಲುವು ಸರಿಯಿದೆ, ರಮ್ಯಾ ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ ಇಂತಿ ಶಿವರಾಜ್ಕುಮಾರ್, ಗೀತಾ ಶಿವರಾಜ್ ಕುಮಾರ್ ಎಂದು ಪೋಸ್ಟ್ ನಲ್ಲಿದೆ.












