ಒಂದು ಮಿಲಿಯನ್ ವೀಕ್ಷಣೆ ಪಡೆದ “ಶೆಟ್ರು ಸಂಸಾರ”!! ನೀವೂ ನೋಡಿ ಆನಂದಿಸಿ…

ಸಿನಿಮಾ ಸೈಕಲ್ ಪ್ರೊಡಕ್ಷನ್ಸ್ & ಭಾಗ್ಯರತ್ನ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಹೇಮಂತ್ ಯುಬಿಸಿ ಬರೆದು ನಿರ್ದೇಶಿಸಿರುವ “ಶೆಟ್ರು ಸಂಸಾರ” ಕಿರು ಚಿತ್ರ ಯೂಟ್ಯೂಬ್ ನಲ್ಲಿ ಭರ್ಜರಿ ಒಂದು ಮಿಲಿಯನ್ ವೀಕ್ಷಣೆ ಪಡೆದು ಜನರನ್ನು ರಂಜಿಸುತ್ತಿದೆ.

ಪ್ರತೀಕ್ ಶೆಟ್ಟಿ, ಪಾಯಲ್ ಚೆಂಗಪ್ಪ, ಸಿದ್ದು ಮಂಡ್ಯ, ಕೃಷ್ಣ ಶೇಂದ್ರೆ ರೋಹಿಣಿ ಸವಿತಾ ಇವರನ್ನು ಒಳಗೊಂಡ ತಾರಾಗಣ ಮನೋಜ್ಞ ಅಭಿನಯ ನೀಡಿದೆ.

ಛಾಯಾಗ್ರಹಣ: ಸುಮಂತ್ ಆಚಾರ್ಯ, ಸಹಾಯಕ ಡಿಒಪಿ: ಸೂಪರ್ ಸಂತು, ಸಂಗೀತ ಗಾಯನ: ರೋಹಿತ್ ಸೊವರ್, ಸಂಕಲನ, ಡಿಐ ಮತ್ತು ಬಣ್ಣ: ಕೂಲ್ ಮಗಾ ಸ್ಟುಡಿಯೋಸ್