ಜಮ್ಮು&ಕಾಶ್ಮೀರ: ಶೇಖ್ ನಗರಕ್ಕೆ ಶಿವನಗರ, ಅಂಫಲ್ಲಾ ಚೌಕ್ ಗೆ ಹನುಮಾನ್ ಚೌಕ್ ಎಂದು ಮರುನಾಮಕರಣ

ಜಮ್ಮು: ಜಮ್ಮು ಮುನ್ಸಿಪಲ್ ಕಾರ್ಪೊರೇಷನ್ (ಜೆಎಂಸಿ) ಮೇಯರ್ ಚಂದರ್ ಮೋಹನ್ ಗುಪ್ತಾ ಶನಿವಾರ (ಜೂನ್ 11) ದಂದು ಈ ಪ್ರದೇಶದಲ್ಲಿ ಎರಡು ಚೌಕ್‌ಗಳ ಹೆಸರನ್ನು ಬದಲಾಯಿಸುವ ನಿರ್ಣಯವನ್ನು ಜೆಎಂಸಿ ಅಂಗೀಕರಿಸಿದೆ ಎಂದು ತಿಳಿಸಿದ್ದಾರೆ. ಇತ್ತೀಚಿನ ನಿರ್ಣಯದ ಪ್ರಕಾರ, ಪ್ರಸುತ ಶೇಖ್ ನಗರವೆಂದು ಗುರುತಿಸಲಾಗುವ ಸ್ಥಳವನ್ನು ಶಿವನಗರ ಎಂದೂ ಮತ್ತು ಅಂಫಲ್ಲಾ ಚೌಕ್ ಅನ್ನು ಇನ್ನು ಮುಂದೆ ಹನುಮಾನ್ ಚೌಕ್ ಎಂದೂ ಕರೆಯಲಾಗುತ್ತದೆ.

ಜಮ್ಮು ಮುನ್ಸಿಪಲ್ ಕಾರ್ಪೊರೇಷನ್ ಶೇಖ್ ನಗರವನ್ನು ಶಿವನಗರ ಮತ್ತು ಅಂಫಲ್ಲಾ ಚೌಕ್ ಅನ್ನು ಹನುಮಾನ್ ಚೌಕ್ ಎಂದು ಬದಲಾಯಿಸಲು ನಿರ್ಣಯವನ್ನು ಅಂಗೀಕರಿಸಿದೆ ಎಂದು ಜೆಎಂಸಿ ಮೇಯರ್ ಚಂದರ್ ಮೋಹನ್ ಗುಪ್ತಾ ಶನಿವಾರದಂದು ಹೇಳಿದ್ದಾರೆ.