ಶೆಫಿನ್ಸ್ ಸ್ಪೋಕನ್ ಇಂಗ್ಲೀಷ್ ತರಬೇತಿ ಕಾರ್ಯಕ್ರಮ ಸಂಪನ್ನ

ಉಡುಪಿ: ಶೆಫಿನ್ಸ್ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿರುವ ಸ್ಪೋಕನ್ ಇಂಗ್ಲೀಷ್ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದ ಅಂಗವಾಗಿ ಆಯ್ದ ಮೂರು ಶಾಲೆಗಳ ಅತಿಥಿ ಹಾಗೂ ಗೌರವ ಶಿಕ್ಷಕಿಯರಿಗಾಗಿ ಉಡುಪಿಯ ಹಿಂದೀ ಪ್ರಚಾರ ಸಮಿತಿಯ ಸಭಾಂಗಣದಲ್ಲಿ ನಡೆಸಿದ 4 ದಿನಗಳ ಉಚಿತ ಸ್ಪೋಕನ್ ಇಂಗ್ಲೀಷ್ ತರಬೇತಿ ಕಾರ್ಯಕ್ರಮ ಸಂಪನ್ನಗೊಂಡಿತು.

ಸಂಪೂರ್ಣ ಚಟುವಟಿಕೆ ಆಧಾರದಲ್ಲಿ ನಡೆಸಲಾಗುತ್ತಿರುವ ಈ ತರಬೇತಿ ಕಾರ್ಯಗಾರವನ್ನು ತರಬೇತುದಾರರಾದ ಮನೋಜ್
ಕಡಬ, ಅಕ್ಷತಾ ಶಣೈ ಮತ್ತು ಜಸ್ನಾ ಸುಧೀಶ್ ನಡೆಸಿಕೊಟ್ಟರು. ಅರ್ಪಿತಾ ಬ್ರಹ್ಮಾವರ ಇವರು ಕಾರ್ಯಕ್ರಮ ಸಂಯೋಜಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟಿನ ಆಡಳಿತ ವಿಶ್ವಸ್ಥೆ ಶರ್ಲಿ ಮನೋಜ್ ವಹಿಸಿದ್ದು, ಮುಖ್ಯ ಅತಿಥಿಯಾಗಿ ಕುಂತಲನಗರ ಭಾರತಿ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯೆ ಸಂಧ್ಯಾ ಕಿಶೋರ್ ಶೆಟ್ಟಿ ಭಾಗವಹಿಸಿದ್ದರು.

ಶೆಫಿನ್ಸ್ ನಿರ್ದೇಶಕ ಮನೋಜ್ ಕಡಬ ಮತ್ತು ಸಂಯೋಜಕಿ ಅರ್ಪಿತಾ ಬ್ರಹ್ಮಾವರ ಉಪಸ್ಥಿತರಿದ್ದರು.

ಓರ್ವ ಶಿಬಿರಾರ್ಥಿಗೆ ಶೆಫಿನ್ಸ್ ಇನ್ನೋವೇಟಿವ್ ಟೀಚಿಂಗ್ ಅವಾರ್ಡ್ ನೀಡಿ ಗೌರವಿಸಲಾಯಿತು.

ಶಿಬಿರಾರ್ಥಿಗಳಾದ ಸೌಮ್ಯ ಕಾರ್ಯಕ್ರಮ ನಿರೂಪಿಸಿ, ಜೋಸ್ಲಿನ್ ಸ್ವಾಗತಿಸಿ, ನೂತನ್ ವಂದಿಸಿದರು.

ಎಲ್ಲ ಶಿಬಿರಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು.