ಇದು ನನ್ನ ಕಲ್ಪನೆಯ ತುಣುಕು, ನೀವೆಲ್ಲರೂ ನೋಡಲೆಂದು ನಾನು ತೆರೆಯ ಮೇಲೆ ತರಲು ಬಯಸಿದ್ದೇನೆ. ವಿಂಡೋ ಸೀಟ್ ನಾನು ತುಂಬಾ ಪ್ರೀತಿ ಮತ್ತು ಸಮರ್ಪಣೆಯಿಂದ ಮಾಡಿದ ಚಿತ್ರ. ನೀವೆಲ್ಲರೂ ಇದನ್ನು ಪ್ರೀತಿಯಿಂದ ವೀಕ್ಷಿಸಿದರೆ ನಾನು ಹೆಚ್ಚು ಕೃತಜ್ಞಳಾಗುತ್ತೇನೆ ಮತ್ತು ಚಿತ್ರವು ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಥಿಯೇಟರಿನಲ್ಲಿ ಬಿಡುಗಡೆಯಾದ ನಂತರ ವಿಂಡೋ ಸೀಟ್ ಮೇಲೆ ನಿಮ್ಮೆಲ್ಲರ ಪ್ರೀತಿಯನ್ನು ಧಾರೆಯೆರೆದಿದ್ದಕ್ಕಾಗಿ ನಾನು ನಿಜವಾಗಿಯೂ ಕೃತಜ್ಞಳಾಗಿದ್ದೇನೆ. ಇದೀಗ ಚಿತ್ರವು ಝೀ5 ಮೂಲಕ ನಿಮ್ಮ ಮುಂದೆ ಬರುತ್ತಿದೆ. ದಯವಿಟ್ಟು ಚಂದಾದಾರರಾಗಿ, ಚಿತ್ರವನ್ನು ವೀಕ್ಷಿಸಿ ಮತ್ತು ನಮ್ಮ ಚಿತ್ರದ ಬಗ್ಗೆ ನಿಮಗೆ ಅನಿಸಿದ ಎಲ್ಲವನ್ನೂ ಕೇಳಲು ನಾನು ಇಲ್ಲಿ ಕಾಯುತ್ತಿದ್ದೇನೆ ಎಂದು ಶೀತಲ್ ಶೆಟ್ಟಿ ಹೇಳಿದ್ದಾರೆ.
ಚಿತ್ರದಲ್ಲಿ ನಿರೂಪ್ ಭಂಡಾರಿ, ಸಂಜನಾ ಆನಂದ್ ಮತ್ತು ಅಮೃತಾ ಅಯ್ಯಂಗಾರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಜಾಕ್ ಮಂಜು ಮತ್ತು ಅಲಂಕಾರ್ ಪಾಂಡಿಯನ್ ಚಿತ್ರ ನಿರ್ಮಾಣ ಮಾಡಿದ್ದಾರೆ.