ಸುದ್ದಿ ನಿರೂಪಕಿ, ನಟಿ ಶೀತಲ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ ವಿಂಡೋ ಸೀಟ್ ಸಿನಿಮಾ ಬಿಡುಗಡೆ ಕಂಡಿದೆ. ಈ ಹಿಂದೆ ಕಿರುಚಿತ್ರ ನಿರ್ದೇಶಿಸಿದ್ದ ಶೀತಲ್ ಶೆಟ್ಟಿ ಈಗ ಕಥೆ ಹಾಗೂ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವಿಂಡೋಸೀಟ್ ಎಂಬುದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಿದು.
ಚಿತ್ರದ ತಾರಾಗಣಲ್ಲಿ ನಿರೂಪ್ ಭಂಡಾರಿ, ಸಂಜನಾ ಆನಂದ್, ಅಮೃತ ಅಯ್ಯಂಗಾರ್ ಮುಂತಾದವರಿದ್ದಾರೆ.
ರಘು ಪಾತ್ರ ನಿರ್ವಹಿಸುತ್ತಿರುವ ನಿರೂಪ್, ಅಮೃತಾ ಅಯ್ಯಂಗಾರ್ ನ ಅಂಜಲಿ ಎಂಬ ಪಾತ್ರದ ಮಾಲೀಕತ್ವದ ಹೈ-ಎಂಡ್ ರೆಸ್ಟೋರೆಂಟ್ನಲ್ಲಿ ಹಾಡುವ ಒಂಟಿ ವ್ಯಕ್ತಿ. ರಘು ತನ್ನ ದೈನಂದಿನ ರೈಲು ಪ್ರಯಾಣದಲ್ಲಿ ತನ್ನ ವಿಂಡೋ ಸೀಟಿನಿಂದ ನೋಡುವ ಹುಡುಗಿ ಸಂಜನಾ ಆನಂದ್ ನ ಪ್ರೀತಿಯಲ್ಲಿ ಬೀಳುತ್ತಾನೆ. ತಾನು ಪ್ರೀತಿಸುತ್ತಿರುವ ಹುಡುಗಿ ಕೊಲ್ಲಲ್ಪಡುವ ದೃಶ್ಯವನ್ನು ರಘು ತನ್ನ ವಿಂಡೋ ಸೀಟ್ ನಿಂದ ನೋಡುತ್ತಾನೆ. ಅಲ್ಲಿಂದ ಮುಂದೆ ಕಥೆ ತಿರುವು ಪಡೆದುಕೊಳ್ಳುತ್ತದೆ.
ಅರ್ಜುನ್ ಜನ್ಯ ಸಂಗೀತ ಹಾಗೂ ವಿಘ್ನೇಶ್ರಾಜ್ ಛಾಯಾಗ್ರಹಣದ ಚಿತ್ರವು ಹಲವಾರು ತಿರುವು ಮತ್ತು ಕುತೂಹಲಗಳನ್ನೊಳಗೊಂಡಿದೆ ಎನ್ನಲಾಗಿದೆ.