ಉಡುಪಿ: ಪಂಚಾ ಷಷ್ಠಿಯ ಪ್ರಯುಕ್ತ ಉಡುಪಿಯ ಮುಚ್ಲುಗೋಡು ಹಾಗು ಸಗ್ರಿ ಸುಬ್ರಹ್ಮಣ್ಯ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿತು.ಬೆಳಗ್ಗೆಯೇ ಆಗಮಿಸಿದ ಭಕ್ತರು ದೇವರಿಗೆ ಹಣ್ಣುಕಾಯಿ ಅರ್ಪಿಸಿದರು. ಹರಕೆಯನ್ನು ಹೊತ್ತಿದ್ದ ಕೆಲ ಭಕ್ತರು ದೇವರಿಗೆ ಅರ್ಪಿಸಿದ ನೈವೇಧ್ಯದ ಎಲೆಯಲ್ಲಿ ಉರುಳು ಸೇವೆ ಮಾಡಿ, ತಮ್ಮ ಹರಕೆಯನ್ನು ದೇವರಿಗೆ ಸಮರ್ಪಿಸಿದರು.ಪ್ರತಿ ವರ್ಷದಂತೆ ದೇವಸ್ಥಾನದ ಆವರಣದಲ್ಲಿ ಜರುಗುವ ಜಾತ್ರೆಗೆ ನೂರಾರು ಭಕ್ತರು ಆಗಮಿಸಿ, ವಿವಿಧ ತಿನಿಸು, ಮಿಠಾಯಿಗಳನ್ನು ಖರೀದಿಸಿದರು. ಸಂಜೆ ವೇಳೆ ನಡೆಯುವ ರಥೋತ್ಸವದಲ್ಲಿ ನೂರಾರು ಜನರು ಪಾಲ್ಗೊಂಡರು.