ಉಡುಪಿ: ಷಷ್ಠಿ ಪ್ರಯುಕ್ತ ವಿವಿಧ ದೇವಸ್ಥಾನಗಳ ನಾಗ ಸನ್ನಿಧಿಯಲ್ಲಿ ಪೂಜಾ ಕಾರ್ಯಗಳು ನಡೆದವು. ಸಗ್ರಿ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನ ಕುಂಜಿಬೆಟ್ಟಿನಲ್ಲಿ ನಾಗಪಾತ್ರಿ ಗೋಪಾಲ್ ಕೃಷ್ಣ ಸಾಮಗರ ಮಾರ್ಗದರ್ಶನದಲ್ಲಿ ಚಂಡಿಕಾ ಹೋಮ, ನಾಗದೇವರಿಗೆ ವಿಶೇಷ ಅಭಿಷೇಕ ನಡೆಯಿತು.
ಶ್ರೀ ವಾಸುಕಿ ಅನಂತ ಪದ್ಮನಾಭ ದೇವಸ್ಥಾನ ಬಡಗುಪೇಟೆಯಲ್ಲಿ ಷಷ್ಠಿ ಮಹೋತ್ಸವದ ಪ್ರಯುಕ್ತ ದೇವರ ಸನ್ನಿಧಾನದಲ್ಲಿ ಆಶ್ಲೇಷ ಬಲಿಸೇವೆ, ಪಲ್ಲ ಪೂಜೆ ನಡೆಯಿತು.
ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಸಾರ್ವಜನಿಕ ಅನ್ನಸಂತರಪಣೆಯಲ್ಲಿ ಭೋಜನ ಪ್ರಸಾದ ಸ್ವೀಕರಿಸಿದರು.
ಕಿದಿಯೂರು ಹೋಟೆಲ್ ಕಾರ್ಣಿಕ ಕೇತ್ರ ನಾಗ ಸನ್ನಿಧಿಯಲ್ಲಿ ಕಬಿಯಾಡಿ ಜಯರಾಂ ಆಚಾರ್ಯ ಮಾರ್ಗದರ್ಶನದಲ್ಲಿ ಮುರಳೀ ಭಟ್ ಬಳಗ ಧಾರ್ಮಿಕ ಪೂಜಾ ವಿಧಾನಗಳಾದ ನವಕ ಕಲಶ ಪ್ರಧಾನ ಹೋಮ ಕ್ಷೀರಾಭಿಷೇಕ ಹಾಗು ಗೆಂದಾಳಿ ಬೊಂಡಾಭಿಷೇಕ ನೆಡೆಸಿಕೊಟ್ಟರು.
ನಾಗಪಾತ್ರಿ ರಾಮಾನಂದ ಭಟ್ ನಾಗದರ್ಶನ ನೆರವೇರಿಸಿದರು. ಹೋಟೆಲ್ ಮಾಲೀಕ ಭುವನೇಂದ್ರ ಕಿದಿಯೂರು ಶ್ರೀಮತಿ ಹೀರಾ ಬಿ. ಕಿದಿಯೂರು, ಜಿತೇಶ್ ಕಿದಿಯೂರು, ಭವ್ಯಶ್ರೀ ಕಿದಿಯೂರು, ಯುವರಾಜ್ ಮಸ್ಖತ್ ಹಾಗೂ ನೂರಾರು ಭಕ್ತರೂ ಉಪಸ್ಥಿತರಿದ್ದರು.