ಕಾರ್ಕಳ: ಶ್ರೀ ಮಹಮ್ಮಾಯಿ ಗದ್ದಿಗೆ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ

ಕಾರ್ಕಳ: ಶ್ರೀ ಮಹಮ್ಮಾಯಿ ಗದ್ದಿಗೆ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವವು ಅಕ್ಟೋಬರ್‌ 15 ರಿಂದ 23 ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ಅ.15 ರಿಂದ 23 ರವರೆಗೆ ಪ್ರತಿನಿತ್ಯವು ತ್ರಿಕಾಲ ಪೂಜೆ ಹಾಗೂ ಗ್ರಾಮಸ್ತರಿಂದ ನಿತ್ಯ ಭಜನೆ ಜರಗಲಿರುವುದು. ಅ.22 ರಂದು ಬ್ರಹ್ಮಶ್ರೀ ಭಜನಾ ಮಂಡಳಿ ಮಾತಿಬೆಟ್ಟು ಇವರಿಂದ ಭಜನಾ ಕಾರ್ಯಕ್ರಮ. ಅ.23ರಂದು ಮಹಾನವಮಿಯ ಪ್ರಯುಕ್ತ ವಿವಿಧ ಭಜನಾ ಮಂಡಳಿಯಿಂದ ಸಂಜೆ 7 ರಿಂದ ಭಜನಾ ಕಾರ್ಯಕ್ರಮ, 8 ರಿಂದ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ 9:30 ರಿಂದ ಶ್ರೀ ದೇವಿಗೆ ನವರಾತ್ರಿ ಮಹಾಪೂಜೆ ಹಾಗೂ ಪಂಜುರ್ಲಿ ದೈವಕ್ಕೆ ಪೂಜೆ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

ದೇವಳಕ್ಕೆ ವಂತಿಕೆ, ಧನಸಹಾಯ, ಉದಾರ ದೇಣಿಗೆ, ಹಾಗೂ ನವರಾತ್ರಿ ಪೂಜೆ, ಕುಂಕುಮಾರ್ಚನೆ, ಪಂಚಕಜ್ಜಾಯ ಇತ್ಯಾದಿ ಪೂಜೆ ಮಾಡಿಸುವವವರು ದೇವಸ್ಥಾನದ ಸೇವಾ ಕೌಂಟರ್‌ನಲ್ಲಿ ರಶೀದಿಯನ್ನು ಪಡೆಯಬೇಕಾಗಿ ಹಾಗೂ ಭಕ್ತಾದಿಗಳಿಂದ ಅಕ್ಕಿ, ಎಳನೀರು, ಹಿಂಗಾರ, ತುಪ್ಪ ಸ್ವಿಕರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ದೇವಸ್ಥಾನದಲ್ಲಿ ಪಾಕಶಾಲೆಯು ನಿರ್ಮಾಣ ಹಂತದಲ್ಲಿದ್ದು ಧನಸಹಾಯ ಮಾಡಲಿಚ್ಛಿಸುವ ಭಕ್ತಾದಿಗಳು ತಮ್ಮ ದೇಣಿಗೆಯನ್ನು ಮುನಿಯಾಲಿನ ಕೆನರಾ ಬ್ಯಾಂಕ್‌ S.B. A/c No. 01702210024254 ,IFSC: CNRB001070 ಕ್ಕೆ ಕಳುಹಿಸಬಹುದು.