ಕುಂದಾಪುರ: ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅ.15 ರಿಂದ ಅ. 24 ರವರೆಗೆ ನಡೆಯಲಿರುವ ಶರನ್ನವರಾತ್ರಿ ಮಹೋತ್ಸವಗಳಿಗೆ ಭಕ್ತರು ತಮ್ಮ ಇಷ್ಟಮಿತ್ರ ಬಂಧು ಬಾಂಧವರೊಡಗೂಡಿ ಆಗಮಿಸಿ, ಶ್ರೀ ಸನ್ನಿಧಿಯಲ್ಲಿ ನಡೆಯುವ ಪೂಜಾ ಉತ್ಸವ ಕಾರ್ಯಕ್ರಮಗಳನ್ನು ವೀಕ್ಷಿಸಿ, ಈ ಪ್ರಸನ್ನ ಕಾಲದಲ್ಲಿ ಶ್ರೀ ಮುಡಿಗಂಧ ಪ್ರಸಾದಗಳನ್ನು ಸ್ವೀಕರಿಸಿ, ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ಸಂಪೂರ್ಣ ಕೃಪೆಗೆ ಪಾತ್ರರಾಗಬೇಕಾಗಿ ಅನುವಂಶಿಕ ಆಡಳಿತ ಮೊಕ್ತೇಸರ ಶೆಟ್ಟಿಪಾಲು ಸಚ್ಚಿದಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶರನ್ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ
15/10/2023ನೇ ಆದಿತ್ಯವಾರ ಸಂಜೆ 7:30ರಿಂದ 7:15ರ ತನಕ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದವರಿಂದ ಯಕ್ಷಗಾನ
16/10/2023ನೇ ಸೋಮವಾರ ಸಂಜೆ ಗಂಟೆ 5:30 ರಿಂದ 7:15 ರ ತನಕ ನಾಗಶ್ರೀ ಮತ್ತು ಬಳಗ ಬೆಂಗಳೂರು ಇವರಿಂದ ಭರತನಾಟ್ಯ ಕಾರ್ಯಕ್ರಮ
17/10/2023ನೇ ಮಂಗಳವಾರ ಸಂಜೆ ಗಂಟೆ 5:30 ರಿಂದ 7:15ರ ತನಕ ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ಬೆಂಗಳೂರು ಇವರಿಂದ ಸಂಗೀತ ಕಾರ್ಯಕ್ರಮ
18/10/2023ನೇ ಬುಧವಾರ ಸಂಜೆ ಗಂಟೆ 5:30 ರಿಂದ 7:15 ರ ತನಕ ಮೈತ್ರಿ ಮಹಿಳಾ ತಾಳಮದ್ದಲೆ ವೇದಿಕೆ ನಿಟ್ಟೂರು ಇವರಿಂದ ಯಕ್ಷಗಾನ ತಾಳಮದ್ದಳೆ
19/10/2023ನೇ ಗುರುವಾರ ಸಂಜೆ ಗಂಟೆ 5:30 ರಿಂದ 7:15 ರ ತನಕ
ಶಿರಿಸಾನ್ವಿ ಮತ್ತು ಸಂಗಡಿಗರು ಶಿವ ಪ್ರಭಾ ಟೀಮ್, ಬೆಂಗಳೂರು ಇವರಿಂದ ಭರತನಾಟ್ಯ ಕಾರ್ಯಕ್ರಮ
20/10/2023ನೇ ಶುಕ್ರವಾರ ಸಂಜೆ ಗಂಟೆ 5:30 ರಿಂದ 7:15 ರ ತನಕ ಶ್ರೀ ಬಿಳಿಗಿರಿ ರಂಗನಾಥ ಮಹಿಳಾ ಮತ್ತು ಮಕ್ಕಳು ಸಮೃದ್ಧಿ ಸಂಘ (ರಿ.) ಬೆಂಗಳೂರು ಇವರಿಂದ ಜನಪದ ನೃತ್ಯ ಕಾರ್ಯಕ್ರಮ
21/10/2023ನೇ ಶನಿವಾರ ಸಂಜೆ ಗಂಟೆ 5:30 ರಿಂದ 7:15ರ ತನಕ ವಿಜಯರಂಗ ಮತ್ತು ತಂಡ ಬೆಂಗಳೂರು ಇವರಿಂದ ಸಂಗೀತ ಕಚೇರಿ ಕಾರ್ಯಕ್ರಮ
22/10/2023ನೇ ಭಾನುವಾರ ಸಂಜೆ ಗಂಟೆ 5:30 ರಿಂದ 7:15ರ ತನಕ ಕಲಾಸಂಗಮ ಕಮಲಶಿಲೆ ಇವರ ವತಿಯಿಂದ ಶ್ರೀ ರಮಣಿದೇವಿ ಯಕ್ಷಗಾನ ಕಲಾಸಂಘ ಹಳ್ಳಿಹೊಳೆ ಮತ್ತು ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಇವರಿಂದ ಯಕ್ಷಗಾನ ತಾಳಮದ್ದಲೆ ಧುರವೀಳ್ಯ
23/10/2023ನೇ ಸೋಮವಾರ ಸಂಜೆ ಗಂಟೆ 5:30 ರಿಂದ 7:15 ರ ತನಕ ನೃತ್ಯಾಂಗಣ ನಾಟ್ಯಾಲಯ ಸಿದ್ದಾಪುರ ಇವರಿಂದ ಭರತನಾಟ್ಯ ಕಾರ್ಯಕ್ರಮ
ಕಾರ್ಯಕ್ರಮಗಳು
ದಿನಾಂಕ 15-10-2023ರಿಂದ 24-10-203ರ ವರೆಗೆ ಪ್ರತಿದಿನ ನವರಾತ್ರಿ ವಿಶೇಷ ಪೂಜೆ, ಮಹಾಪೂಜೆ, ತ್ರಿಕಾಲ ಬಲಿ ಉತ್ಸವ ಮತ್ತು ಮಹೋತ್ಸವ
ದಿನಾಂಕ 20-10-2023ನೇ ಶುಕ್ರವಾರ ರಾತ್ರಿ ಶಾರದಾ ದೇವಿ ಪ್ರತಿಷ್ಠಾಪನೆ, ವಿಶೇಷ ಪೂಜೆ
ದಿನಾಂಕ 23-10-2023ನೇ ಸೋಮವಾರ ನವಮಿಯಂದು ಮಧ್ಯಾಹ್ನ ಶ್ರೀ ಚಂಡಿಕಾ ಯಾಗ, ರಾತ್ರಿ ರಜತ ರಥೋತ್ಸವ ಮತ್ತು ಪುಷ್ಪಕವಾಹನದಲ್ಲಿ ಪುರ ಮೆರವಣಿಗೆ (ರಥ ಬೀದಿ ಮತ್ತು ರಾಜಬೀದಿ)
ದಿನಾಂಕ 24-10-2023ನೇ ಮಂಗಳವಾರ ಉದಯ ಪೂರ್ವ 6-05 ಗಂಟೆಗೆ ಕದಿರು ಮುಹೂರ್ತ, ಧಾನ್ಯ ಸಂಗ್ರಹ ಕಣಜ ತುಂಬಿಸುವುದು, ಶಮೀ ಪೂಜೆ ಮತ್ತು ಸಂಜೆ ವಿಜಯೋತ್ಸವ.
ಪ್ರತಿದಿನ ಸಂಜೆ 7 ಗಂಟೆಗೆ ಮಹಾಮಂಗಳಾರತಿ
ಪ್ರತಿದಿನ ಸಂಜೆ 5:30 ಗಂಟೆಯಿಂದ 7:15 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವಿರುತ್ತದೆ.
ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮವಿರುತ್ತದೆ.
ವಿ.ಸೂ: ಮಧ್ಯಾಹ್ನ ಮತ್ತು ರಾತ್ರಿ ಬಂದ ಭಕ್ತರಿಗೆ ಊಟದ ವ್ಯವಸ್ಥೆ ಇದೆ. ಪ್ರತಿದಿನ ರಾತ್ರಿ ಉತ್ಸವದ ನಂತರ ಸಿದ್ದಾಪುರ ಹಾಗೂ ಹಳ್ಳಿಹೊಳೆ ಕಡೆ ಹೋಗುವವರಿಗೆ ಬಸ್ಸಿನ ವ್ಯವಸ್ಥೆ ಇದೆ.
ಪ್ರತಿದಿನ ಮಧ್ಯಾಹ್ನ ಚಂಡಿಕಾ ಯಾಗ ಮತ್ತು ಸಂಜೆ ಶ್ರೀ ರಂಗ ಪೂಜಾ ಮತ್ತು ರಾತ್ರಿ ಬೆಳ್ಳಿ ರಥೋತ್ಸವ ಸೇವೆ ಹಾಗೂ ಅನ್ನ ಸಂತರ್ಪಣೆ ಸೇವೆ ಇರುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9591560809, 7022449830