ಉಡುಪಿ: ನೀಲಾವರದ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ಸೆ. 26 ರಿಂದ ಅ. 05ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಉದ್ಘಾಟನಾ ಸಮಾರಂಭವು ಸೆ.26 ಸೋಮವಾರ ಸಂಜೆ: 6.30ಕ್ಕೆ ಗಾಲವ ಮಂಟಪ, ಶ್ರೀ ಮಹಿಷಮರ್ದಿನೀ ದೇವಸ್ಥಾನ,
ನೀಲಾವರ ಇಲ್ಲಿ ನಡೆಯಲಿದೆ.
ಉದ್ಘಾಟನೆ :ಕೆ. ರಘುಪತಿ ಭಟ್, ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ
ಅಧ್ಯಕ್ಷತೆ: ಎನ್. ರಘುರಾಮ ಮಧ್ಯಸ್ಥ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಶ್ರೀ ಮಹಿಷಮರ್ದಿನೀ ದೇವಸ್ಥಾನ, ನೀಲಾವರ
ಮುಖ್ಯ ಅತಿಥಿಗಳು: ಮಹೇಂದ್ರ ಕುಮಾರ್, ನೀಲಾವರ ಅಧ್ಯಕ್ಷರು ಗ್ರಾಮ ಪಂಚಾಯತ್, ನೀಲಾವರ
ಧನಂಜಯ ಅಮೀನ್ ಪೇತ್ರಿ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕನ್ನಾರು
ರತ್ನಾಕರ ಭಟ್ ಆರೂರು ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಆರೂರು
ಸರ್ವರಿಗೂ ಆದರದ ಸ್ವಾಗತ ಬಯಸುವ: ಪ್ರಶಾಂತ್ ಕುಮಾರ್ ಶೆಟ್ಟಿ ಕಾರ್ಯನಿರ್ವಹಣಾಧಿಕಾರಿ
, ಎನ್. ರಘುರಾಮ ಮಧ್ಯಸ್ಥ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ
ವ್ಯವಸ್ಥಾಪನಾ ಸಮಿತಿ ಸದಸ್ಯರು
ಎನ್. ಚಂದ್ರಶೇಖರ ಅಡಿಗ, ಸುಧೀರ್ ಕುಮಾರ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ ಮಟಪಾಡಿ, ಅನೂಪ್ ಕುಮಾರ್ ಶೆಟ್ಟಿ, ಶ್ರೀಮತಿ ಹೇಮಾ ವಿ. ಬಾಸ್ರಿ, ಕೆ.ತಮ್ಮಯ್ಯ ನಾಯ್ಕ್,
ರುದ್ರ ದೇವಾಡಿಗ, ಶ್ರೀಮತಿ ಜಯಂತಿ ಮೆಂಡನ್
ಅಭಿವೃದ್ಧಿ ಸಮಿತಿ, ಅರ್ಚಕರು, ಉಪಾದಿವಂತರು ಮತ್ತು ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು
ಶ್ರೀ ಕ್ಷೇತ್ರ ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನ, ನೀಲಾವರ
ಸ್ವಸ್ತಿ| ಶ್ರೀ ಶುಭಕೃತ್ ನಾಮ ಸಂವತ್ಸರದ ಆಶ್ವೀಜ ಶುದ್ಧ ಪ್ರತಿಪದಿ ತಾ. 26-09-2022ನೇ ಸೋಮವಾರ ಮೊದಲ್ಗೊಂಡು ತಾ.04-10-2022ನೇ ಮಂಗಳವಾರ ಪರ್ಯಂತ ಶ್ರೀ ದೇವಿಯ ದಿವ್ಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವವು ಆಚರಿಸಲ್ಪಡುವುದು. ಈ ಮಹೋತ್ಸವದಲ್ಲಿ ಪ್ರತಿದಿನವೂ ದುರ್ಗಾ ಹೋಮ ಮತ್ತು ದಶಮಿ ದಿನ ತಾ.05-10-2022ನೇ ಬುಧವಾರದಂದು ಚಂಡಿಕಾಯಾಗ, ಸಂಜೆ ಸಾಮೂಹಿಕ ದೀಪ ನಮಸ್ಕಾರವು ನಡೆಯಲಿರುವುದು. ಭಕ್ತಾದಿಗಳು ತಮ್ಮ ಇಷ್ಟಮಿತ್ರರೊಡಗೂಡಿ ಶ್ರೀ ಸನ್ನಿಧಿಗೆ ಆಗಮಿಸಿ, ಉತ್ಸವಾದಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತನು-ಮನ-ಧನಗಳಿಂದ ಸಹಕರಿಸಿ, ಶ್ರೀಮುಡಿ ಗಂಧ- ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವಿಯ ಪೂರ್ಣ ಕೃಪೆಗೆ ಪಾತ್ರರಾಗಬೇಕಾಗಿ ಸಾದರದಿಂದ ಅಪೇಕ್ಷಿಸುವ,
ಪ್ರಶಾಂತ್ ಕುಮಾರ್ ಶೆಟ್ಟಿ ಕಾರ್ಯನಿರ್ವಹಣಾಧಿಕಾರಿ , ಎನ್. ರಘುರಾಮ ಮಧ್ಯಸ್ಥ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ
ವ್ಯವಸ್ಥಾಪನಾ ಸಮಿತಿ ಸದಸ್ಯರು
ಎನ್. ಚಂದ್ರಶೇಖರ ಅಡಿಗ, ಸುಧೀರ್ ಕುಮಾರ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ ಮಟಪಾಡಿ, ಅನೂಪ್ ಕುಮಾರ್ ಶೆಟ್ಟಿ, ಶ್ರೀಮತಿ ಹೇಮಾ ವಿ. ಬಾಸ್ರಿ, ಕೆ. ತಮ್ಮಯ್ಯ ನಾಯ್ಕ್, ರುದ್ರ ದೇವಾಡಿಗ, ಶ್ರೀಮತಿ ಜಯಂತಿ ಮೆಂಡನ್
ಅಭಿವೃದ್ಧಿ ಸಮಿತಿ, ಅರ್ಚಕರು, ಉಪಾದಿವಂತರು ಮತ್ತು ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು
ನವರಾತ್ರಿ ಉತ್ಸವದ ವಿಶೇಷ ಸೇವೆಗಳು:
ನವರಾತ್ರಿಯ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ವಿಶೇಷ ಅನ್ನ ಸಂತರ್ಪಣೆ ಇರುತ್ತದೆ.
ಒಂದು ದಿನದ ದುರ್ಗಾ ಹೋಮ ₹ 4,500/-
ದೇವಸ್ಥಾನಕ್ಕೆ ಒಂದು ದಿನದ ಹೂವಿನ ಅಲಂಕಾರ ₹ 10000/-
ವಿಜಯದಶಮಿ ಚಂಡಿಕಾ ಹೋಮ ₹ 1000/-
ವಿಜಯದಶಮಿ ದಿನದಂದು ಸಂಜೆ ಪೂಜೆ ಸಾಮೂಹಿಕ ದೀಪ ನಮಸ್ಕಾರ ₹ 1500/-
ನವರಾತ್ರಿಯ ಪರ್ವ ದಿನಗಳಲ್ಲಿ ಶ್ರೀ ಕ್ಷೇತ್ರದಲ್ಲಿ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 12.00ರ ತನಕ ಮಕ್ಕಳಿಗೆ ಅಕ್ಷರಾಭ್ಯಾಸ ಸೇವೆ ಮಾಡಿಸಲು ಅವಕಾಶವಿದೆ.
ಭಕ್ತಾದಿಗಳು ಮುಂಗಡವಾಗಿ ಸೇವಾ ಮೊತ್ತವನ್ನು ಪಾವತಿಸಿ ರಶೀದಿ ಪಡೆದು ಸೇವೆಯನ್ನು ನಿಗದಿಗೊಳಿಸಬಹುದು.
ನವರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ಸಂಜೆ 7.00 ರಿಂದ
ತಾ: 26.09.2022, ಸೋಮವಾರ ಶ್ರೀ ಮಹಿಷಮರ್ದಿನೀ ದಶಾವತಾರ ಯಕ್ಷಗಾನ ಮೇಳ, ನೀಲಾವರ ಇವರಿಂದ ಯಕ್ಷಗಾನ ಬಯಲಾಟ ಪ್ರಸಂಗ: “ಶಿವ ಪಂಚಾಕ್ಷರೀ”
ತಾ: 27.09.2022, ಮಂಗಳವಾರ ನಂದಗೋಕುಲ ಕಲಾವಿದರು ಮಂಗಳೂರು ಇವರಿಂದ “ಗಾನ ನೃತ್ಯ ವೈಭವ” ನಿರ್ದೇಶನ: ಶ್ವೇತಾ ಅರೆಹೊಳೆ
ತಾ: 28.09.2022, ಬುಧವಾರ “ನಗೆ ನವರಾತ್ರಿ” ಕುಂದ ಕನ್ನಡ ಖ್ಯಾತಿಯ ಮನುಹಂದಾಡಿಯವರಿಂದ
ತಾ: 29.09.2022, ಗುರುವಾರ ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಸತೀಶ್ ಹೆಮ್ಮಾಡಿ ನೇತೃತ್ವದ “ಭ್ರಮಾ ಲೋಕ” ಜಾದೂ ತಂಡದಿಂದ “ಜಾದೂ ಜಾತ್ರೆ”
ತಾ: 30.09.2022, ಶುಕ್ರವಾರ ಶ್ರೀ ದುರ್ಗಾ ನೃತ್ಯ ಅಕಾಡೆಮಿ (ರಿ.) ಮೈಸೂರು ಇವರಿಂದ “ಭರತ ನಾಟ್ಯ” ವಿದೂಷಿ ಶ್ರೀಮತಿ ಶ್ರೀ ವಿದ್ಯಾ ಶಶಿಧರ್
ತಾ: 01.10.2022, ಶನಿವಾರ ಯಕ್ಷ ಸಮೂಹ ಯಕ್ಷಗಾನ ಕಲಾ ಪ್ರತಿಷ್ಠಾನ (ರಿ.) ಕೆಳಕುಂಜಾಲು ನೀಲಾವರ ಇವರಿಂದ “ಯಕ್ಷಗಾನ ಬಯಲಾಟ”
ತಾ: 02.10.2022, ಭಾನುವಾರ ಕಲಾಸ್ಪೂರ್ತಿ ಹವ್ಯಾಸಿ ನಾಟಕ ತಂಡ ಕುಂದಾಪುರ ಇವರಿಂದ ಸಾಮಾಜಿಕ ನಗೆ ನಾಟಕ “ಇವತ್ತ್ ಆಟ ನಮ್ದೆ”
ತಾ: 03.10.2022, ಸೋಮವಾರ ಶ್ರೀಮತಿ ವೀಣಾಪ್ರಸನ್ನ, ವಿಷ್ಣುಮಂಗಲ, ಕಾಸರಗೋಡು ಇವರಿಂದ “ದಾಸ ಸಂಕೀರ್ತನೆ”
ತಾ: 04.10.2022, ಮಂಗಳವಾರ ವಿಶ್ವ ಕೀರ್ತಿ ಹಿರಿಯ ಪ್ರಾಥಮಿಕ ಶಾಲೆ, ಕುಂಜಾಲು ಶಾಲಾ ಮಕ್ಕಳಿಂದ “ವೈವಿಧ್ಯಮಯ ಕಾರ್ಯಕ್ರಮ”
ತಾ: 05.10.2022, ಬುಧವಾರ “ಭಕ್ತಿ ಗಾನ” ಬೆಳಿಗ್ಗೆ: ವಿಷ್ಣು ಭಜನ್ಸ್, ಬ್ರಹ್ಮಾವರ ಸಂಜೆ: ಶ್ರೀ ಭಕ್ತಿ ಭಜನಾ ಮಂಡಳಿ, ಪಾಲಮೇ, ಶಿರ್ವ
ತಾ: 26.09.2022, ಸೋಮವಾರ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ.
ಪ್ರತಿದಿನ ಬೆಳಿಗ್ಗೆ 10.00-2.00 ಮತ್ತು ಸಂಜೆ 5.00-7.00ರ ತನಕ ವಿವಿಧ ಭಜನಾ ಮಂಡಳಿಗಳಿಂದ “ಭಜನಾ ಕಾರ್ಯಕ್ರಮ”
ಚಂಡಿಕಾ ಶಾಂತಿ, ದುರ್ಗಾ ಹೋಮ, ದೀಪ ನಮಸ್ಕಾರ, ರಂಗ ಪೂಜೆ ಹಾಗೂ ಇತರ ವಿಶೇಷ ಹರಕೆ ಸೇವೆಗಳ ಬಗ್ಗೆ ಶ್ರೀ ದೇವಳದ ಕಚೇರಿಯನ್ನು ಸಂಪರ್ಕಿಸಿ ಹೆಸರನ್ನು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ.
ಭಕ್ತಾದಿಗಳಿಂದ ದೇವಳದಲ್ಲಿ ನಿತ್ಯ ನಡೆಯುವ ಅನ್ನದಾನ ಮತ್ತು ಅಭಿವೃದ್ಧಿ ಕಾರ್ಯಕ್ಕೆ ದೇಣಿಗೆ ಹಣವನ್ನು ಹಾಗೂ ವಸ್ತು ರೂಪದ ದೇಣಿಗೆ ಮತ್ತು ಹಸಿರು ಹೊರೆಯನ್ನು ಆದರ ಪೂರ್ವಕವಾಗಿ ಸ್ವೀಕರಿಸಲಾಗುವುದು. ಉತ್ಸವ, ನವರಾತ್ರಿ ಹಾಗೂ ವಿಶೇಷ ಶುಭ ದಿನಗಳಲ್ಲಿ ಕಾಣಿಕೆ ಮತ್ತು ಸೇವಾದಿಗಳನ್ನು ನಡೆಸಲು ಶ್ರೀ ದೇವಸ್ಥಾನದ ವಿಳಾಸಕ್ಕೆ ಹಣವನ್ನು ಕಳುಹಿಸಿಕೊಟ್ಟಲ್ಲಿ ಸೇವೆ ಜರುಗಿಸಿ ಪ್ರಸಾದವನ್ನು ಕಳುಹಿಸಿಕೊಡಲಾಗುವುದು. ಶ್ರೀ ಕ್ಷೇತ್ರದ ದಶಾವತಾರ ಯಕ್ಷಗಾನ ಮೇಳದ ಹರಕೆ ಸೇವೆ ಆಟ ಆಡಿಸುವ ಭಕ್ತಾದಿಗಳು ತಮ್ಮ ಹೆಸರು ಮತ್ತು ವಿಳಾಸವನ್ನು ಶ್ರೀ ದೇವಳದ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ. ಶ್ರೀ ಕ್ಷೇತ್ರಕ್ಕೆ ಹಣ ಕಳುಹಿಸುವ ಭಕ್ತಾದಿಗಳು ಸೇವೆಯ ವಿವರ ಸ್ಪಷ್ಟವಾಗಿ ನಮೂದಿಸಬೇಕು ಇಲ್ಲದಿದ್ದಲ್ಲಿ ಕಾಣಿಕೆಯಾಗಿ ಸ್ವೀಕರಿಸಲಾಗುವುದು. ಶ್ರೀ ದೇವಳದ ಸುತ್ತುಪೌಳಿಯ ಕಾಮಗಾರಿಯು ಪೂರ್ಣಗೊಂಡಿದ್ದು, ಪಂಚಮಿ ಕಾನು ನಾಗಬನದ ಹಾಗೂ ಹೊರಹೆಬ್ಬಾಗಿಲಿನ ಜೀರ್ಣೋದ್ಧಾರ ಕಾರ್ಯ, ಹೊರಸುತ್ತಿನ ನೆಲಕ್ಕೆ ಕಲ್ಲುಚಪ್ಪಡಿ ಹಾಸುವಿಕೆ ಕೆಲಸ ಬಾಕಿ ಇದ್ದು ಇದಕ್ಕೆ ಭಕ್ತಾದಿಗಳಿಂದ ಆರ್ಥಿಕ ನೆರವನ್ನು ಯಾಚಿಸುತ್ತ, ಈ ಮೂಲಕ ತಾವು ಶ್ರೀ ಕ್ಷೇತ್ರದ ಜೀರ್ಣೋದ್ದಾರದ ಪುಣ್ಯಕಾರ್ಯದಲ್ಲಿ ಭಾಗಿಗಳಾಗಬೇಕಾಗಿ ವಿನಂತಿಸುತ್ತೇವೆ.