ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ: ಅ.23ರಂದು‌ ಮಹಾನವಮಿ, ಅ.24ರಂದು ವಿಜಯದಶಮಿ

ಪಡುಬಿದ್ರಿ: ನಂದಿಕೂರು ಶ್ರೀ ದುರ್ಗಾಪರಮೇಶ್ವರೀದಲ್ಲಿ ವೈಭವದ ಶರನ್ನವರಾತ್ರಿ ಮಹೋತ್ಸವವು ಅ.24 ರ ವರೆಗೆ ನಡೆಯಲಿದೆ. ಪ್ರತೀದಿನ ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ, ರಾತ್ರಿ ಗಂಟೆ 8.00ಕ್ಕೆ ನವರಾತ್ರಿ ಪೂಜೆ ನಡೆಯಲಿರುವುದು.

ಕಾರ್ಯಕ್ರಮಗಳು:

ಅ.21 ಶನಿವಾರ ಶ್ರೀ ಸೂಕ್ತ ಹೋಮ, ವನದುರ್ಗಾ ಹೋಮ, ಮಹಾಪೂಜೆ, ರಾತ್ರಿ ನವರಾತ್ರಿ ಪೂಜೆ.

ಅ.22 ಆದಿತ್ಯವಾರ “ದುರ್ಗಾಷ್ಟಮಿ”, ಚಂಡಿಕಾಯಾಗ, ನವಗ್ರಹ ಪ್ರಾರ್ಥನೆ, ಗಣಪತಿ ಯಾಗ, ಮಹಾಪೂಜೆ ಅನ್ನಸಂತರ್ಪಣೆ. ರಾತ್ರಿ ನವರಾತ್ರಿ ಪೂಜೆ, ರಾತ್ರಿ ರಂಗಪೂಜೆ.

ಅ.23 ಸೋಮವಾರ “ಮಹಾನವಮಿ”, ಸಾರ್ವಜನಿಕ ಚಂಡಿಕಾಯಾಗ, ಗಂಟೆ 10.00ಕ್ಕೆ ಪೂರ್ಣಾಹುತಿ. ಮಹಾಪೂಜೆ ಸಮಾರಾಧನೆ, ಮಧ್ಯಾಹ್ನ 1.00ಗಂಟೆಗೆ ಭೂರಿ ಭೋಜನ: ರಾತ್ರಿ ನವರಾತ್ರಿ ಪೂಜೆ, ರಂಗಪೂಜೆ, ಮಹಾಮಂತ್ರಾಕ್ಷತೆ ಫಲಹಾರ ವ್ಯವಸ್ಥೆ.

ಅ.24 ಮಂಗಳವಾರ ವಿಜಯದಶಮಿ, ಮಹಾಪೂಜೆ, ಅನ್ನಸಂತರ್ಪಣೆ, ಚಂಡಿಕಾಯಾಗ, ನವಗ್ರಹ ಪ್ರಾರ್ಥನೆ, ಗಣಪತಿ ಯಾಗ.

ಸಾಂಸ್ಕೃತಿಕ ಕಾರ್ಯಕ್ರಮಗಳು:

ಅ.21 ಶನಿವಾರ ಬೆಳಿಗ್ಗೆ 9.00ಕ್ಕೆ ಶ್ರೀಮತಿ ವಿಜಯ ಡಿ. ಭಟ್ ನಾಧಸುಧಾ ಸಂಗೀತ ಕಲಾಮಂದಿರ ಜೆ.ಪಿ. ನಗರ, ಬೆಂಗಳೂರು ಇವರ ಸಂಗಡಿಗರಿಂದ “ಸಂಗೀತ ಸುಧಾ” ಸಂಜೆ 4.00ಕ್ಕೆ ಪಾಂಡುರಂಗ ಮಹಿಳಾ ಭಜನಾ ಮಂಡಳಿ ಕೆಮ್ಮುಂಡೇಲು ಇವರಿಂದ “ಕುಣಿತ ಭಜನೆ” ಹಾಗೂ ಸ್ಥಳೀಯ ಯುವ ಪ್ರತಿಭೆಗಳಿಂದ “ನಾಟ್ಯ ವೈಭವ”

ಅ.22 ಆದಿತ್ಯವಾರ ಬೆಳಿಗ್ಗೆ 9.00ಕ್ಕೆ ಪ್ರಸಿದ್ಧ ಗಾಯಕಿರಾದ ಕುಮಾರಿ ಅರ್ಚನಾ ಹಾಗೂ ಕುಮಾರಿ ಸಮನ್ವಿ ಉಡುಪಿ ಇವರಿಂದ “ಶಾಸ್ತ್ರೀಯ ಸಂಗೀತ”

ಸಂಜೆ 4.00ಕ್ಕೆ ನರೇಂದ್ರ ಅಡ್ವೆ, ರಾಜೇಶ್ ಭಟ್ ನಂದಿಕೂರು “ಗೀತ ಗಾಯನ” ಹಾಗೂ ವಿದುಷಿ ಡಾ. ಭಾಗ್ಯಶ್ರೀ ಕಡಬ ಜಿ. ಶ್ರೀ ನೃತ್ಯಕಲಾಕೇಂದ್ರ ಪಡುಬಿದ್ರೆ ಇವರ ಶಿಷ್ಯ ವೃಂದದಿಂದ ಹಾಗೂ ವಿದ್ವಾನ್ ಶ್ರವಣ್ ಯು. ಎಂ.ಬೆಂಗಳೂರು ಇವರಿಂದ “ನೃತ್ಯ ಸಂಗಮ”

ಅ.23 ಸೋಮವಾರ ಬೆಳಗ್ಗೆ 9.00ಕ್ಕೆ ಪ್ರಸಿದ್ಧ ಗಾಯಕಿ ಜಗದೀಶ್ ಆಚಾರ್ಯ ಪುತ್ತೂರು ಇವರಿಂದ “ಭಕ್ತಿ ಗಾನ ಸುಧೆ”.

ಸಂಜೆ 4.00ಕ್ಕೆ ಕದ್ರಿ ಸಹೋದರಿಯರಾದ ಶ್ರೀಮತಿ ಚೈತ್ರ ಶ್ರೇಯಸ್, ಕುಮಾರಿ ವರ್ಷಾ ಅಡಿಗ, ಕುಮಾರಿ ಪ್ರಸೀದ ಧರ್ಮಸ್ಥಳ, ಶ್ರೀಮತಿ ಅನನ್ಯ, ಕುಮಾರಿ ಸಾನ್ವಿ ಇವರಿಂದ “ಸಂಗೀತ ಸುಧೆ”

ಅ.24 ಮಂಗಳವಾರ ಬೆಳಿಗ್ಗೆ 9.00ಕ್ಕೆ ವಿದೂಷಿ ಶ್ರೀಮತಿ ವಾಣಿ ಸತೀಶ್ ಎಲ್ಲೂರು ಇವರ ಶಿಷ್ಯೆ ವೃಂದದಿಂದ “ಭಕ್ತಿ ಗಾನ” ಸಂಜೆ 4.00ಕ್ಕೆ ಅಡ್ವೆ ಲಕ್ಷ್ಮೀಶ ಆಚಾರ್ಯ ಇವರಿಂದ ಪ್ರವಚನ

ಅ.28 ಶನಿವಾರ ಕೋಜಾಗರೀ ವ್ರತ, ಚಂಡಿಕಾಯಾಗ, ನವಗ್ರಹ ಪ್ರಾರ್ಥನೆ, ಗಣಪತಿ ಯಾಗ, ಮಹಾಪೂಜೆ, ಅನ್ನಸಂತರ್ಪಣೆ. ಇದೇ ದಿನ ವರ್ಷಂಪ್ರತಿ ನಡೆಯುವ “ಭಜನಾ ಮಂಗಲೋತ್ಸವವು” ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಜರಗಲಿರುವುದು.