ದೊಡ್ಡಣ್ಣ ಗುಡ್ಡೆ : ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವಕ್ಕೆ ಚಾಲನೆ

ದೊಡ್ಡಣ್ಣ ಗುಡ್ಡೆ: ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲ ನಿರಂತರ ಹತ್ತು ದಿನಗಳ ಕಾಲ ನೆರವೇರಲಿರುವ ನವರಾತ್ರಿ ಮಹೋತ್ಸವಕ್ಕೆ ಕದಿರು ಕಟ್ಟುವಿಕೆಯೊಂದಿಗೆ ಚಾಲನೆ ನೀಡಲಾಯಿತು.

ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಆದ್ಯ ಗಣಪತಿಯಾಗ ಜೋಡಿ ಚಂಡಿಕಾಯಾಗ ಕಲ್ಪೋಕ್ತ ಪೂಜಾ ಸಹಿತ ರಂಗ ಪೂಜೆ ದುರ್ಗಾ ನಮಸ್ಕಾರ ಪೂಜೆ ರಾತ್ರಿಯ ಮಹಾಪೂಜೆಗಳು ನೆರವೇರಿದವು.

ವಿವೇಕ್ ನಳಿನಿ ರಾವ್ ಹಾಗೂ ಆದಿತ್ಯ ಮುಕುಂದ ರಾವ್ ಅವರ ಪ್ರಯುಕ್ತ ಚಂಡಿಕಾಯಾಗ ರಾಧಾ ರಾಜೇಂದ್ರ ನಾಡರ್ ಪ್ರಯುಕ್ತ ದುರ್ಗಾ ನಮಸ್ಕಾರ ಪೂಜೆ ನೆರವೇರಿತು.

ಮಧ್ಯಾಹ್ನ ಹಾಗೂ ರಾತ್ರಿ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆ ನಡೆಯಿತು. ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ಕ್ಷೇತ್ರದ ಸ್ವಾತಿ ಆಚಾರ್ಯ, ಮಣಿಪಾಲದ ಅರ್ಚನ ಆಶ್ಲೇಷ ಅವರ ಶಿಷ್ಯೆ ಅಕ್ಷರ ಹಾಗೂ ಆರಾಧ್ಯ, ಬ್ರಹ್ಮರಿ ನಾಟ್ಯಾಲಯದ ಧೃತಿ ನರ್ತನ ನಾಟ್ಯ ಅಕಾಡೆಮಿಯ ಈಶಾನ್ ಕೌಂಡಿಲ್ಯ,ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

ನಿರಂತರ ಮೃಷ್ಟಾನ್ನ ಸಮರ್ಪನೆಯೊಂದಿಗೆ ನೆರವೇರಲಿರುವ ನವರಾತ್ರಿ ಮಹೋತ್ಸವದಲ್ಲಿ ದಿನಂಪ್ರತಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಅವಶ್ಯಕತೆಗಳನ್ನು ಸೂಕ್ತವಾಗಿ ಕಲ್ಪಿಸಲಾಗಿದೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ.