ಉಡುಪಿ: ಶ್ರೀ ಕ್ಷೇತ್ರ ನೀಲಾವರದ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಅಕ್ಟೋಬರ್ 11ರಿಂದ 20ರವರೆಗೆ ಶರನ್ನವರಾತ್ರಿ ಮಹೋತ್ಸವ ಹಾಗೂ ಅಕ್ಟೋಬರ್ 21ರಂದು ವಿಜಯದಶಮಿ ಮಹೋತ್ಸವ ನಡೆಯಲಿದೆ.
ನವರಾತ್ರಿ ಮಹೋತ್ಸವದ ಅಂಗವಾಗಿ ಪ್ರತಿದಿನ ಶ್ರೀ ದೇವಿಯ ಸನ್ನಿಧಿಯಲ್ಲಿ ದುರ್ಗಾ ಹೋಮ ನಡೆಯಲಿದ್ದು, ವಿಜಯದಶಮಿ ದಿನದಂದು ಸಾಮೂಹಿಕ ಚಂಡಿಕಾಯಾಗ ಹಾಗೂ ಸಂಜೆ ಸಾಮೂಹಿಕ ದೀಪ ನಮಸ್ಕಾರ ನೆರವೇರಲಿದೆ. ನವರಾತ್ರಿಯ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ವಿಶೇಷ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದೆ.
ನವರಾತ್ರಿಯ ಪರ್ವದಿನಗಳಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಮಕ್ಕಳಿಗೆ ಅಕ್ಷರಾಭ್ಯಾಸ ಸೇವೆ ಮಾಡಿಸಲು ಅವಕಾಶವಿದೆ.
ಭಕ್ತರು ತಮ್ಮ ಇಷ್ಟಮಿತ್ರರೊಂದಿಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿ, ಉತ್ಸವದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ದೇವಿಯ ಪ್ರಸಾದ ಸ್ವೀಕರಿಸಿ ಪೂರ್ಣಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ, ಅರ್ಚಕರು, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ವಿನಂತಿಸಿದ್ದಾರೆ.















