ಬ್ರಹ್ಮಾವರ: ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಅ.15ರಿಂದ 24ರ ವರೆಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ಈ ಪ್ರಯುಕ್ತ ಪ್ರತಿದಿನ ದುರ್ಗಾಹೋಮ ವಿಜಯ ದಶಮಿಯಂದು ಚಂಡಿಕಾ ಹೋಮ ಹಾಗೂ ಸಂಜೆ ಸಾಮೂಹಿಕ ದೀಪ ನಮಸ್ಕಾರ ಮತ್ತು ಅನ್ನಸಂತರ್ಪಣೆ ಜರುಗಲಿವೆ.
ನವರಾತ್ರಿ ಉತ್ಸವದ ವಿಶೇಷ ಸೇವೆಗಳು
ಒಂದು ದಿನದ ದುರ್ಗಾಹೋಮ ರೂ.4500/
ದೇವಸ್ಥಾನಕ್ಕೆ ಒಂದು ದಿನದ ಹೂವಿನ ಅಲಂಕಾರ ರೂ.10000/-
ವಿಜಯದಶಮಿ ಚಂಡಿಕಾ ಹೋಮ ರೂ. 1000/-
ವಿಜಯದಶಮಿ ದಿನದಂದು ಸಂಜೆ ಸಾಮೂಹಿಕ ದೀಪ ನಮಸ್ಕಾರ ರೂ.1500/-
ನವರಾತ್ರಿಯ ಪರ್ವದಿನಗಳಲ್ಲಿ ಶ್ರೀ ಕ್ಷೇತ್ರದಲ್ಲಿ ಬೆಳಿಗ್ಗೆ 9.00ರಿಂದ ಮಧ್ಯಾಹ್ನ 12.00 ತನಕ ಪ್ರತಿ ದಿನ ಅಕ್ಷರಾಭ್ಯಾಸ ಸೇವೆ ಮಾಡಿಸಲು ಅವಕಾಶವಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.