ಉಡುಪಿ: ಕಳೆದ 7 ವರ್ಷಗಳಿಂದ ಉಡುಪಿಯ ಕುಂಜಿಬೆಟ್ಟಿನ ಶ್ರೀಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಮಹಿಳೆಯರಿಗೆ ಮಾಂಟೇಸರಿ, ನರ್ಸರಿ ಟೀಚರ್ ಟ್ರೈನಿಂಗ್ ನಡೆಸುತ್ತಿದೆ. ಮಕ್ಕಳನ್ನು ಸಹಜವಾಗಿ 2.5 – 3 ವರ್ಷಗಳಿಂದ ಸರ್ಕಾರಿ ಶಾಲೆ ಕಲಿಸಲಾಗುತ್ತದೆ. ಮಾಂಟೆಸ್ಸರಿ ಬೋಧನೆಯೂ ಮಗುವಿನ ಎಲ್ಲಾ ಅಂಶಗಳನ್ನು ಬೆಳೆಸುವ ಕಡೆಗೆ ವ್ಯವಹರಿಸುತ್ತದೆ. ವಿಶೇಷ ಕಾರ್ಯಾಗಾರಗಳು ಮತ್ತು ವಿಚಾರಗೋಷ್ಠಿಗಳನ್ನು ಈ ತರಬೇತಿಯ ಅವಧಿಯಲ್ಲಿ ಒಳಗೊಂಡಿದೆ. ಮಾಂಟೆಸ್ಸರಿ ವಿಧಾನದ ಸಲಕರಣೆಗಳನ್ನು ಉಪಯೋಗಿಸುವುದು ಮತ್ತು ಮಗುವಿನ ದೈಹಿಕ ಭಾವನಾತ್ಮಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಅನುಕೂಲವಾಗುವ ಬೋಧನಾ ವಿಧಾನಗಳನ್ನು ಹೇಳಿಕೊಡಲಾಗುತ್ತದೆ.
ಈ ತರಬೇತಿ ಪಡೆದ ಶಿಕ್ಷಕಿಯರಿಗೆ ಅಪಾರ ಬೇಡಿಕೆಯಿದೆ. ತರಬೇತಿಯ ನಂತರ ಅನೇಕ ಶಾಲೆಗಳಲ್ಲಿ ಸಂದರ್ಶನಕ್ಕೆ ಹೋಗಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಈಗಾಗಲೇ ಇಲ್ಲಿನ ಶಿಕ್ಷಕಿ ವಿದ್ಯಾರ್ಥಿಗಳಿಗೆ (CBSE / ICSE) ಶಾಲೆಗಳಲ್ಲಿ ಉದ್ಯೋಗ ದೊರಕಿದೆ. ಭಾರತದ ಸರ್ಕಾರದ ನಿರುದ್ಯೋಗ ನಿರ್ಮೂಲನಾ ಏಜೆನ್ಸಿಯಾದ ಭಾರತ್ ಸೇವಕ ಸಮಾಜದ ಆಶ್ರಯದಲ್ಲಿ ನಡೆಸಲ್ಪಡುವ ಈ ಕೋರ್ಸಿಗೆ ಪ್ರವೇಶ ಆರಂಭವಾಗಿದ್ದು, ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಮಹಿಳಾ ಅಭ್ಯರ್ಥಿಗಳು ಈ ತರಬೇತಿಗೆ ಪ್ರವೇಶ ಪಡೆದುಕೊಳ್ಳಬಹುದು. ಆಸಕ್ತಿ ಇರುವವರು ಹೆಚ್ಚಿನ ಮಾಹಿತಿಗಾಗಿ ಉಡುಪಿ ಕುಂಜಿಬೆಟ್ಟು ಲಾ ಕಾಲೇಜಿನ ಎದುರು, ರಮೇಶ್ ಭಟ್ ಕಾಂಪ್ಲೆಕ್ಸ್ ನ ಎರಡನೇ ಮಹಡಿಯಲ್ಲಿರುವ ಸಂಸ್ಥೆಯ ಸಂಯೋಜಕಿ ಸುನೀತಾ ಅವರನ್ನು ಸಂಪರ್ಕಿಸುವಂತೆ (9901722527) ಸಂಸ್ಥೆಯು ಪ್ರಕಟಣೆ ತಿಳಿಸಿದೆ.