ತೆಂಕಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶಾರದಾ ದೇವಿಗೆ ದೇವಳದ ಅರ್ಚಕ ದಯಾಘನ್ ಭಟ್ ಮಹಾ ಮಂಗಳಾರತಿ ಬೆಳಗಿಸಿ ಶೋಭಾ ಯಾತ್ರೆಗೆ ಚಾಲನೆ ನೀಡಿದರು. ಗುರುವಾರದಂದು ಸಂಜೆ ಶ್ರೀ ಶಾರದಾ ದೇವಿಯ ಉತ್ಸವವು ದೇವಾಲಯದಿಂದ ಹೊರಟು ಐಡಿಯಲ್ ಸರ್ಕಲ್, ಡಯಾನಾ ಸರ್ಕಲ್, ತ್ರಿವೇಣಿ ಸರ್ಕಲ್, ಚಿತ್ತರಂಜನ್ ಸರ್ಕಲ್, ಕೊಳದಪೇಟೆ ಮೂಲಕ ದೇವಾಲಯಕ್ಕೆ ಬಂದು ದೇವಾಲಯದ ಪದ್ಮ ಸರೋವರದಲ್ಲಿ ಶಾರದಾ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.
ಶೋಭಾಯಾತ್ರೆಯ ಸಮಯ ಉಡುಪಿ ನಗರವನ್ನು ತಳಿರು ತೋರಣ ವಿದ್ಯುತ್ ದೀಪಗಳಿಂದ ಅಲಂಕರಿತಗೊಳಿಸಲಾಗಿತ್ತು. ಕೀಲು ಕುದುರೆ,ತ ಟ್ಟೀರಾಯ, ಸ್ಥಬ್ದ ಚಿತ್ರಗಳಾದ ವೆಂಕಟರಮಣ, ಶ್ರೀ ದೇವಿ, ಶ್ರೀ ಮೂಕಾಂಬಿಕಾ, ಚಂಡೆ ಮೇಳ, ಟಸ್ಸಾಲೆ ಮಂಗಳ ವಾದ್ಯ,ಮುಂತಾದ ಜನಾಕರ್ಷ ಟ್ಯಾಬ್ಲೊಗಳೊಂದಿಗೆ ಉಡುಪಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಪಿ.ವಿ.ಶೆಣೈ, ವಸಂತ್ ಕಿಣಿ, ವಿಶ್ವನಾಥ್ ಭಟ್, ಪುಂಡಲೀಕ್ ಕಾಮತ್ ಗಣೇಶ್ ಕಿಣಿ, ಅಶೋಕ ಬಾಳಿಗಾ, ರೋಹಿತಾಕ್ಷ ಪಡಿಯಾರ್, ನರಹರಿ ಪೈ, ವಿಶಾಲ್ ಶೆಣೈ, ಉಮೇಶ್ ಪೈ, ಶಾಮ್ ಪ್ರಸಾದ್ ಕುಡ್ವಾ , ನಿತೇಶ, ನಾಗೇಶ್ ಪೈ, ಮತ್ತು ಆಡಳಿತ ಮಂಡಳಿಯ ಸದಸ್ಯರು ಹಾಗು ಜಿ.ಸ್.ಬಿ. ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ದೇವಳದಲ್ಲಿ ನವರಾತ್ರಿ ಅಂಗವಾಗಿ ಶ್ರೀ ದುರ್ಗಾಂಬಾ ಯಕ್ಷಗಾನ ಕಲಾ ಮಂಡಳಿ ಮಣಿಪಾಲ ಇವರಿಂದ ಕೊಂಕಣಿ ಯಕ್ಷಗಾನ ಶಮತಂಕ ರತ್ನ ಯಕ್ಷಗಾನ ನಡೆಯಿತು. ಪ್ರಸಂಗವನ್ನು ನಿರ್ದೇಶಿಸಿ ಭಾಗವತಿಕೆ ನಡೆಸಿದವರು ರತ್ನಾಕರ ಶೆಣೈ ಶಿವಪುರ , ಚಂಡೆ ಗಣೇಶ್ ಶೆಣೈ ಶಿವಪುರ, ಮದ್ದಳೆಯಲ್ಲಿ ಶ್ರೀಪತಿ ಭಟ್ ಉಡುಪಿ ಸಹಕರಿಸಿದರು