ಉಡುಪಿಯ ಶ್ರೀ ಶಾರದ ಟೀಚರ್ ಟ್ರೈನಿಂಗ್ಇನ್ಸ್ಟಿಟ್ಯೂಟ್ ಮಹಿಳೆಯರ ಪಾಲಿಗೆ ಆಶಾಕಿರಣ, ಮಹಿಳೆಯರ ಬದುಕಿಗೊಂದು ಸ್ಪೂರ್ತಿ. ಹೌದು ವಿದ್ಯಾರ್ಥಿನಿಯರ, ಯುವತಿಯರ/ಮಹಿಳೆಯರ ಉಜ್ವಲ ಭವಿಷ್ಯದ ಆಶಾಕಿರಣವಾದ ನರ್ಸರಿ / ಮಾಂಟೆಸ್ಸರಿ ಶಿಕ್ಷಕಿಯರ ಒಂದು ವರ್ಷದ ತರಬೇತಿಯನ್ನು ಉಡುಪಿಯ ಶ್ರೀ ಶಾರದ ಟೀಚರ್ ಟ್ರೈನಿಂಗ್ಇನ್ಸ್ಟಿಟ್ಯೂಟ್ ಭಾರತ್ ಸೇವಕ್ ಸಮಾಜದ ಆಶ್ರಯದಲ್ಲಿ ನಡೆಸುತ್ತಿದೆ.
ಈ ಅವಧಿಯಲ್ಲಿ, ಪ್ರಾಯೋಗಿಕಜ್ಞಾನ, ಸುಸ್ಥಾಪಿತ ಶಾಲೆಯಲ್ಲಿ ತರಬೇತಿ, ಪಠ್ಯಕ್ರಮದ ಯೋಜನೆ, ಧ್ವನಿಶಾಸ್ತ್ರ, ಮಲ್ಟಿಮೀಡಿಯಾ ಆಧಾರಿತ ಬೋಧನೆಯ ತರಬೇತಿ, ಕಂಪ್ಯೂಟರ್ ಮತ್ತು ಸ್ಪೋಕನ್ ಇಂಗ್ಲೀಷ್ ತರಬೇತಿ ಮುಂತಾದ ವಿಷಯಗಳ ಬಗ್ಗೆ ವಿವಿಧ ತರಬೇತಿ ಕಾರ್ಯಾಗಾರಗಳು ನಡೆಸಲಾಗುತ್ತಿದೆ.
ಅಂತೆಯೇ ನಿಯಮಿತ ಮತ್ತು ವಾರಾಂತ್ಯದ ಬ್ಯಾಚುಗಳು, 100% ಉದ್ಯೋಗಕ್ಕೆ ನೆರವು, ಶಿಕ್ಷಣ ಪ್ರವಾಸ ಮತ್ತು ಕ್ಯಾಂಪ್ನ್ನು ಆಯೋಜಿಸಲಾಗುತ್ತಿದೆ. ಪೋಷಕರಿಗೆ ಸೂಕ್ತ ರೀತಿಯಲ್ಲಿ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಹಾಗೂ ಮಗುವಿನ ನಿರ್ವಹಣೆ ಸುಧಾರಿಸಲು ಈ ಕೋರ್ಸು ತುಂಬಾ ಸಹಾಯಕವಾಗಿದೆ. ಇಲ್ಲಿ ನಿರುದ್ಯೋಗಿ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಮತ್ತು ತರಬೇತಿ ಪಡೆಯದ ಶಿಕ್ಷಕರಿಗೂ ಅವಕಾಶವಿದೆ. ಈಗಾಗಲೇ ಪ್ರವೇಶಾತಿ ಆರಂಭವಾಗಿದ್ದು, ಕೆಲವು ಸೀಟುಗಳು ಲಭ್ಯವಿದ್ದು, ಪ್ರವೇಶ ಬಯಸುವ ವಿದ್ಯಾರ್ಥಿಗಳು ಈ ಕೂಡಲೇ ಶ್ರೀ ಶಾರದ ಟೀಚರ್ ಟ್ರೈನಿಂಗ್ಇನ್ಸ್ಟಿಟ್ಯೂಟ್, ರಮೇಶ್ ಭಟ್ ಕಾಂಪ್ಲೆಕ್, ಲಾ ಕಾಲೇಜು ಎದುರು, ಕುಂಜಿಬೆಟ್ಟು 9901722527 ಕೂಡಲೇ ಸಂಪರ್ಕಿಸಿ.