ತೆಂಕುಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶಾರದಾ ಮಾತೆ ಪ್ರತಿಷ್ಠಾಪನೆ

ತೆಂಕುಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶಾರದಾ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಶಾರದಾ ಮಾತೆಯ ಮೂರ್ತಿಯನ್ನು ಉಡುಪಿ ಕುಕ್ಕಿಕಟ್ಟೆಯಿಂದ ದೇವಾಲಯಕ್ಕೆ ಗುರುವಾರ ಸಂಜೆ ಮೆರವಣಿಗೆಯಲ್ಲಿ ತರಲಾಯಿತು. ದೇವಳದ ಅರ್ಚಕ ವಿನಾಯಕ್ ಭಟ್, ಧಾರ್ಮಿಕ ಪೂಜಾ ವಿಧಾನಗಳೊಂದಿಗೆ ಪ್ರತಿಷ್ಠಾಪನೆ ಹಾಗು ಮಹಾ ಮಂಗಳಾರತಿ ಬೆಳಗಿಸಿದರು.

6 ದಿನಗಳ ಕಾಲ ಶಾರದಾ ಪೂಜೆ ನಡೆಯಲಿದ್ದು, ನ. 25 ರ ಸಂಜೆ ಶೋಭಾಯಾತ್ರೆ ಜರುಗಲಿದೆ.